ETV Bharat / state

ಕಂಟೇನರ್​ನಲ್ಲಿ 49 ಕೆಜಿ ಗಾಂಜಾ ಪತ್ತೆ : ಉಡುಪಿಯಲ್ಲಿ ಇಬ್ಬರ ಬಂಧನ

author img

By

Published : Aug 22, 2020, 10:21 PM IST

Updated : Aug 22, 2020, 10:44 PM IST

ಕಂಟೇನರ್​ನಲ್ಲಿ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಲಾರಿ ಚಾಲಕ, ನಿರ್ವಾಹಕನನ್ನು ವಶಕ್ಕೆ ಪಡೆದಿದ್ದಾರೆ.

49-kg-marijuana-detected-in-lorry-police-arrested-two-people-in-udupi
ಕಂಟೇನರ್​ನಲ್ಲಿ 49 ಕೆ.ಜಿ ಗಾಂಜಾ ಪತ್ತೆ

ಉಡುಪಿ: ನಗರದ ಡಿಸಿಐಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಉತ್ತರಪ್ರದೇಶ ರಿಜಿಸ್ಟ್ರೇಶನ್ ಲಾರಿಯಲ್ಲಿ ಕರಾವಳಿಗೆ ಬರುತ್ತಿದ್ದ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ ಬಳಿ ಡಿಸಿಐಬಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಉತ್ತರಪ್ರದೇಶ ರಿಜಿಸ್ಟ್ರೇಷನ್ ಲಾರಿ ಬಂದಿದೆ. ಕಂಟೇನರ್ ಲಾರಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಬಿದಿರಿನ ಕೋಲುಗಳು ಸಿಕ್ಕಿವೆ. ಕಂಟೈನರ್​ನಲ್ಲಿ ಬಿದಿರಾ ಅಂತ ಸಂಶಯಗೊಂಡ ಪೊಲೀಸರು ಚಾಲಕ ಮತ್ತು ನಿರ್ವಾಹಕರ ವಿಚಾರಣೆ ನಡೆಸಿದಾಗ ಇಬ್ಬರೂ ತಬ್ಬಿಬ್ಬಾಗಿದ್ದಾರೆ.

ಕಂಟೇನರ್​ನಲ್ಲಿ 49 ಕೆಜಿ ಗಾಂಜಾ ಪತ್ತೆ: ಇಬ್ಬರ ಬಂಧನ

ಕಂಟೇನರ್ ಅನ್ನು ಓಪನ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಕೆಲ ಬಿದಿರು ಕೋಲುಗಳನ್ನು ಓಪನ್ ಮಾಡಿ ನೋಡಿದಾಗ ಗಾಂಜಾದ ಪ್ಯಾಕೆಟ್​ಗಳು ಸಿಕ್ಕಿವೆ. ಕಂಟೇನರ್​ನಲ್ಲಿ 49 ಕೆ.ಜಿ ಗಾಂಜಾ ಸಿಕ್ಕಿದೆ ಎನ್ನಲಾಗಿದೆ. ಲಾರಿ ಚಾಲಕ, ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಂಟೇನರ್ ಸೀಜ್ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಗಾಂಜಾ ವಹಿವಾಟು ನಡೆಯುತ್ತದೆ ಎಂಬುದು ಜಗಜ್ಜಾಹೀರು. ಗಾಂಜಾ ವ್ಯಾಪಾರಿಗಳು ಕೂಡ ಈ ಭಾಗದ ಯುವಕರನ್ನು ಗಾಂಜಾ ಗಿರಾಕಿಗಳಾಗಿ ಪರಿವರ್ತಿಸಿದ್ದು, ಸರ್ಕಾರ ಮತ್ತು ಪೊಲೀಸರ ನಿದ್ದೆಗೆಡಿಸಿದೆ. ಒಂದು ಕಾರ್ಯಾಚರಣೆಯಲ್ಲಿ ಸಿಕ್ಕಿದ್ದು ಇಷ್ಟು. ತಪಾಸಣೆ ಇಲ್ಲದಿದ್ದಾಗ, ಕಾರ್ಯಾಚರಣೆ ನಡೆಸದಿದ್ದಾಗ ಸಾಗಾಟವಾದದ್ದು ಎಷ್ಟು ಎಂಬುದು ಎಲ್ಲರ ಪ್ರಶ್ನೆ.

Last Updated : Aug 22, 2020, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.