ಉಡುಪಿ: ಕಾರಿನಲ್ಲಿ ಕುಳಿತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಹೊಸನಗರ ವ್ಯಾಪ್ತಿಯ ಆಸಿಫ್ ಬಾಷಾ (38) ರಿಯಾಜ್ ಪ್ರಾಯ(29) ಬಂಧಿತರಾಗಿದ್ದಾರೆ. ಇವರಿಂದ 3.13 ಲಕ್ಷ ರೂಪಾಯಿ ಮೌಲ್ಯದ 2.38 ಕೆ.ಜಿ ಗಾಂಜಾ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಶೆಡ್‌ವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಕಂಡ್ಲೂರು ನಿವಾಸಿಗಳಾದ ಕರಾಣಿ ಮಹಮ್ಮದ್ ನದೀಮ್(25), ಬೆಟ್ಟಿ ಮಹಮ್ಮದ್ ಅಫ್ಜಲ್ (28) ಆರೋಪಿಗಳಾಗಿದ್ದು, ರಯಾನ್ ಪರಾರಿಯಾಗಿದ್ದಾನೆ.
ಈ ಆರೋಪಿಗಳಿಂದ 8 ಸಾವಿರ ರೂಪಾಯಿ ಮೌಲ್ಯದ 360 ಗ್ರಾಂ ಗಾಂಜಾ ಹಾಗೂ 2 ಬೈಕ್, 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.