ETV Bharat / state

ಬರ್ತ್​ಡೇ ಪಾರ್ಟಿಯಲ್ಲೇ ಮುಹೂರ್ತ ಇಟ್ಟ ಸ್ನೇಹಿತರು, ಹುಟ್ಟು ಹಬ್ಬದಂದೇ ಯುವಕನ ಬರ್ಬರ ಹತ್ಯೆ - ತುಮಕೂರು ಕೊಲೆ 2020,

ಜನ್ಮದಿನದಂದೇ ತನ್ನ ಸ್ನೇಹಿತರಿಂದಲೇ ಬರ್ಬರವಾಗಿ ಯುವಕನೊಬ್ಬ ಕೊಲೆಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

Young man killed, Young man killed by Friends, Young man killed by Friends in Tumkur, Tumkur murder, Tumkur murder 2020, Tumkur murder 2020 news, ಯುವಕನ ಕೊಲೆ, ಸ್ನೇಹಿತನಿಂದ ಯುವಕ ಕೊಲೆ, ತುಮಕೂರಿನಲ್ಲಿ ಸ್ನೇಹಿತನಿಂದ ಯುವಕನ ಕೊಲೆ, ತುಮಕೂರು ಕೊಲೆ, ತುಮಕೂರು ಕೊಲೆ 2020, ತುಮಕೂರು ಕೊಲೆ 2020 ಸುದ್ದಿ,
ಜನ್ಮದಿನದಂದೇ ಸ್ನೇಹಿತರಿಂದ ಬರ್ಬರವಾಗಿ ಕೊಲೆಯಾದ ಯುವಕ
author img

By

Published : Sep 11, 2020, 7:26 PM IST

ತುಮಕೂರು: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನನ್ನು ಆತನ ಸ್ನೇಹಿತರು ವೈಯಕ್ತಿಕ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ಅನು (22) ಕೊಲೆಯಾದ ಯುವಕ. ನಗರದ ಕೊತಿತೋಪು ಬಳಿಯ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿ ಅನು ನಿನ್ನೆ ರಾತ್ರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ನಂತರ ಸ್ನೇಹಿತರೊಂದಿಗೆ ಅನು ಹೊರಗಡೆ ತೆರಳಿದ್ದಾನೆ. ಆದರೆ ಸುಮಾರು 10 ಗಂಟೆ ಸಂದರ್ಭದಲ್ಲಿ ಅನು ಕೊಲೆಯಾಗಿರುವ ವಿಷಯ ಕುಟುಂಬದವರಿಗೆ ತಿಳಿದಿದೆ.

ಅನು ದೇಹದ ಮೂರು ಕಡೆ ಡ್ರ್ಯಾಗರ್​ನಿಂದ ಆತನ ಸ್ನೇಹಿತರು ಇರಿದು ಕೊಂದಿದ್ದಾರೆ. ತೀವ್ರ ರಕ್ತಸ್ರಾವದಿಂದ ತನ್ನ ಹುಟ್ಟುಹಬ್ಬದ ದಿನದಂದೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನ್ಮದಿನದಂದೇ ಸ್ನೇಹಿತರಿಂದ ಬರ್ಬರವಾಗಿ ಕೊಲೆಯಾದ ಯುವಕ

ನಿನ್ನೆ ರಾತ್ರಿ ಅನುವಿನ ಜೊತೆ ಆತನ ಸ್ನೇಹಿತರಾದ ರಾಜ ಮತ್ತು ಪ್ರತಾಪ ಜೊತೆ ಹೊರಗಡೆ ಹೋಗಿದ್ದರು. ಪೊಲೀಸ್ ಮೂಲಗಳ ಪ್ರಕಾರ ಗಂಗಸಂದ್ರ ಬಳಿಯ ಬಾರೊಂದರಲ್ಲಿ ಮದ್ಯವನ್ನು ತೆಗೆದುಕೊಂಡು ಬಂದು ಅನುವಿಗೆ ಕುಡಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಡ್ರ್ಯಾಗರ್​ನಿಂದ ಇಬ್ಬರು ಸ್ನೇಹಿತರು ಸೇರಿ ಅನುವನ್ನು ಕೊಲೆ ಮಾಡಿದ್ದಾರೆ.

ಕೊಲೆ ಬಳಿಕ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರತಾಪ ಕಾಲು ಮುರಿದುಕೊಂಡು ಓಡಿ ಹೋಗಲಾಗದೆ ಅಲ್ಲಿಯೇ ಬಿದ್ದಿದ್ದಾನೆ. ಪ್ರತಾಪ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಾಥಮಿಕ ತನಿಖೆಯ ವೇಳೆ ಈ ಕೊಲೆಗೆ ವೈಯಕ್ತಿಕ ದ್ವೇಷದ ಹಿನ್ನೆಲೆ ಇರಬಹುದೆಂದು ಅನುಮಾನಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಅನು ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದನು. ಬಳಿಕ ಅಲ್ಲಿ ಆತ ಕೆಲಸ ಬಿಟ್ಟಿದ್ದನು. ನಿನ್ನೆ ರಾತ್ರಿ ಆತ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ದೊರೆತಿತ್ತು. ಆದರೆ ಬೆಳಗ್ಗೆ ಸುಮಾರು 5 ಗಂಟೆ ಸಂದರ್ಭದಲ್ಲಿ ಆತ ಕೊಲೆಯಾಗಿರುವ ವಿಷಯ ತಿಳಿದು ಅಚ್ಚರಿ ಉಂಟು ಮಾಡಿತು ಎಂದು ಆತನ ಚಿಕ್ಕಪ್ಪ ನರಸಿಂಹಮೂರ್ತಿ ತಿಳಿಸಿದ್ದಾರೆ.

ಮಗನನ್ನು ಕಳೆದುಕೊಂಡ ಪೋಷಕರು ಮತ್ತು ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.