ETV Bharat / state

ತುಮಕೂರು: ಕಲ್ಯಾಣಿಯಲ್ಲಿ ಮುಳುಗಿ ಬಾಲಕ ಸಾವು - ತುಮಕೂರಿನ ಕಲ್ಯಾಣಿಯಲ್ಲಿ ಮುಳುಗಿ ಯುವಕ ಮೃತ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ದೇವಾಲಯದ ಎದುರಿನ ಕಲ್ಯಾಣಿಯಲ್ಲಿ ಘಟನೆ ನಡೆದಿದೆ.

ದೇವಾಲಯದ ಕಲ್ಯಾಣಿ
ದೇವಾಲಯದ ಕಲ್ಯಾಣಿ
author img

By

Published : Jun 20, 2022, 8:25 PM IST

ತುಮಕೂರು: ದೇವಾಲಯದ ಸಮೀಪದಲ್ಲಿರುವ ಕಲ್ಯಾಣಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಬಾಲಕನನ್ನು ತರುಣ್ (16 ವರ್ಷ) ಎಂದು ಗುರುತಿಸಲಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಲಕ್ಕನಹಳ್ಳಿ ಗ್ರಾಮದ ನಾಗಣ್ಣ ಎಂಬುವರ ಮಗನಾದ ಈತ ತಾಯಿಯೊಂದಿಗೆ ದೇಗುಲಕ್ಕೆ ಬಂದಿದ್ದ. ಕಲ್ಯಾಣಿ ಸಮೀಪ ತಾಯಿ ಗಂಗೆ ಪೂಜೆಯಲ್ಲಿ ನಿರತರಾಗಿದ್ದಾಗ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಹಾಗೂ ಪೊಲೀಸರು ಕಲ್ಯಾಣಿಯಿಂದ ಶವ ಮೇಲೆತ್ತಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಇಬ್ಬರು ಶಾಸಕರ ವಿರುದ್ಧ ದೂರು ನೀಡಲು ಜೆಡಿಎಸ್‍ ತಯಾರಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.