ತುಮಕೂರು: ಸಾರ್ವಜನಿಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅವರ ಕುಂದು-ಕೊರತೆ ಸಭೆಯನ್ನು ನಡೆಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹೆಚ್ಚು ಮಾಡಬೇಕಿದೆ. ಈ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಹಕಾರ ನೀಡಲಾಗುವುದು ಎಂದು ಲೋಕಾಯುಕ್ತ ಇಲಾಖೆಯ ಡಿವೈಎಸ್ಪಿ ರವಿಕುಮಾರ್ ಹೇಳಿದರು.
ಇಂದು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಇದೇ ವೇಳೆ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಮತ್ತು ಇತ್ಯರ್ಥವಾಗದೇ ಇರುವ ಅರ್ಜಿಗಳ ಬಗ್ಗೆ ಸಾರ್ವಜನಿಕರಿಂದ ಲಿಖಿತ ದೂರು, ಅರ್ಜಿ ಸ್ವೀಕರಿಸಲಾಯಿತು.
ಸಮಸ್ಯೆ ಬಗೆಹರಿಸುವಂತೆ ಸುಮಾರು 15 ಅರ್ಜಿಗಳು ಈಗಾಗಲೇ ಬಂದಿವೆ. ಸಾರ್ವಜನಿಕರ ಕೆಲಸ ಮಾಡುವಲ್ಲಿ ಕೆಲ ಅಧಿಕಾರಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ರೀತಿ ಕೆಲವರು ವಿಳಂಬ ಧೋರಣೆಯನ್ನು ತೋರಿದ್ದಾರೆ. ಸಣ್ಣ ದೋಷಗಳಿಂದ ಇತ್ಯರ್ಥವಾಗದೇ ಉಳಿದ ಸಮಸ್ಯೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸುವ ಕಾರ್ಯ ಮಾಡಲಾಗುವುದು ಎಂದರು ಹೇಳಿದರು.