ETV Bharat / state

ತ್ರಿವಿಧ ದಾಸೋಹದ ಜೊತೆಗೆ ಪರಿಸರ ಪ್ರೀತಿ ಮೂಡಿಸಲು ಸಜ್ಜಾಗಿದೆ ಸಿದ್ದಗಂಗಾ ಮಠ - ಶ್ರೀ ಸಿದ್ದಲಿಂಗ ಸ್ವಾಮೀಜಿ

ಅಕ್ಷರ, ಅನ್ನ ಹಾಗೂ ಜ್ಞಾನ ದಾಸೋಹಕ್ಕೆ ಹೆಸರುವಾಸಿಯಾಗಿರುವ ಶ್ರೀ ಸಿದ್ದಗಂಗಾ ಮಠ ಇದೀಗ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಮುಂದಾಗಿದೆ.

tumkur matt starts sri siddaganga aranya programme
ಸಿದ್ದಗಂಗಾ ಮಠ
author img

By

Published : Jul 29, 2021, 4:52 PM IST

ತುಮಕೂರು: ಹೆಚ್ಚುತ್ತಿರುವ ತಾಪಮಾನ, ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಿರುವ ಪರಿಸರ ನಾಶವನ್ನು ತಪ್ಪಿಸಲು ಸಿದ್ಧಗಂಗಾ ಮಠ ಮುಂದಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ವತಿಯಿಂದ 'ಶ್ರೀ ಸಿದ್ದಗಂಗಾ ಅರಣ್ಯ' ಎಂಬ ವಿನೂತನ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.

ಸಿದ್ದಗಂಗಾ ಅರಣ್ಯ ಕಾರ್ಯಕ್ರಮ ಆರಂಭ

ಪರಿಸರ ಕಾಳಜಿಗೆ ಮುಂದಾಗಿರುವ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕ ಹಾಗೂ ಮಹಿಳಾ ಘಟಕಗಳ ಸಹಕಾರದಿಂದ ವಿನೂತನವಾಗಿ ವೃಕ್ಷಾರೋಹಣ ಅಭಿಯಾನ ಆರಂಭವಾಗಿದೆ. ಇದರ ಅಂಗವಾಗಿ ಗಿರಿಶಿಖರಗಳಿಗೆ ಹೊಂದಿಕೊಂಡಂತಿರುವ ಮಠದ ಜಮೀನಿನಲ್ಲಿ ಸಸಿ ನೆಡುವ ಮೂಲಕ ಸಿದ್ದಲಿಂಗ ಸ್ವಾಮೀಜಿ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೀರಶೈವ ಲಿಂಗಾಯಿತ ಸಮಾಜದ ಯುವಶಕ್ತಿ ಈ ರೀತಿ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಬೇಕು, ಗಿಡ ಸಂಪತ್ತನ್ನು ಬೆಳೆಸುವುದಷ್ಟೇ ಅಲ್ಲ, ಅದನ್ನು ರಕ್ಷಿಸುವುದು ಅಷ್ಟೇ ಮುಖ್ಯ ಎಂದು ಶ್ರೀಗಳು ಹೇಳಿದ್ರು.

ಪರಿಸರದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಸಿದ್ದಗಂಗಾ ವನದಲ್ಲಿ ಹಣ್ಣಿನ ಮರಗಳಿಗೂ ಪ್ರಾಧಾನ್ಯತೆ ನೀಡಲಾಗಿದೆ. ಮಠಕ್ಕೆ ಸೇರಿದ ಖಾಲಿ ಜಾಗದಲ್ಲಿ ಸುಮಾರು 5 ಸಾವಿರ ವಿವಿಧ ಜಾತಿಯ ಗಿಡಗಳನ್ನ ನೆಡುವ ಮೂಲಕ ಸಿದ್ದಗಂಗಾ ವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮಾವು,ಬೇವು, ಹಲಸು, ಹುಣಸೆ ಅರಳಿ, ಆಲ ಸೇರಿದಂತೆ ಅನೇಕ ರೀತಿಯ ಸಸಿಗಳನ್ನು ನೆಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.