ತುಮಕೂರು: ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಇದುವರೆಗೆ ಜಿಲ್ಲೆಯಾದ್ಯಂತ 8,835 ಜನರ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 7316 ಜನರಲ್ಲಿ ನೆಗೆಟಿವ್ ಕಂಡುಬಂದಿದೆ ಮತ್ತು 1,433 ಜನರ ವರದಿ ಬಾಕಿ ಇದೆ.
ಜಿಲ್ಲೆಯಾದ್ಯಂತ 1,433 ಮಂದಿಯ ಸ್ಯಾಂಪಲ್ಗಳ ವರದಿ ಬರುವುದು ಬಾಕಿ ಇದ್ದು, 59 ಜನರ ಸ್ಯಾಂಪಲ್ ವರದಿಯನ್ನು ಜಿಲ್ಲಾಡಳಿತ ತಿರಸ್ಕರಿಸಿ ಪುನಃ ಪರೀಕ್ಷೆಗೆ ಕಳುಹಿಸಿದೆ. ಇದೂವರೆಗೆ ಜಿಲ್ಲೆಯಲ್ಲಿ 27 ಮಂದಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ.
13 ವರ್ಷದ ಬಾಲಕ ಸೇರಿ ಈವರೆಗೆ ಐವರು ಗುಣಮುಖರಾಗಿದ್ದು, 20 ಮಂದಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಐದು ಕಡೆ ಕಂಟೈನ್ಮೆಟ್ ಝೋನ್ಗಳೆಂದು ಗುರುತಿಸಿ ಸೀಲ್ಡೌನ್ ಮಾಡಲಾಗಿದೆ.