ತುಮಕೂರು: ಕೆಎಸ್ಆರ್ಟಿಸಿ ನೌಕರರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರೊಬ್ಬರು ಸಮಸ್ಯೆ ಕುರಿತಂತೆ ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಈ ವೇಳೆ ಪ್ರಯಾಣಿಕ ಸಾರಿಗೆ ಸಮಸ್ಯೆ ಕುರಿತು ಹೇಳಿಕೊಂಡಾಗ ಶಾಸಕರ ಪ್ರತಿಕ್ರಿಯೆ ಹೀಗಿತ್ತು...
ತಿಪಟೂರಿನಿಂದ ಚನ್ನರಾಯಪಟ್ಟಣಕ್ಕೆ ಹೋಗಲು ಬಸ್‌ಗಳ ತೊಂದರೆಯಿದೆ ಎಂದು ಪ್ರಯಾಣಿಕರೊಬ್ಬರು ಶಾಸಕರಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ವೇಳೆ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ವಿರುದ್ಧ ಶಾಸಕರು ವಾಗ್ದಾಳಿ ನಡೆಸಿದ್ದಾರೆ. ಕೊರೊನಾ ಪಿಡುಗಿನ ವೇಳೆ ಅನೇಕ ತಿಂಗಳುಗಳ ಕಾಲ ಸರ್ಕಾರ ನೌಕರರಿಗೆ ಮನೆಯಲ್ಲಿಯೇ ಕೂರಿಸಿ ಸಂಬಳ ನೀಡಿದೆ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು. ಜೊತೆಗೆ ಸಮಸ್ಯೆ ಅರ್ಥ ಮಾಡಿಕೊಳ್ಳುವಂತೆಯೂ ಪ್ರಯಾಣಿಕನಿಗೂ ಮನವಿ ಮಾಡಿದ್ದಾರೆ.