ETV Bharat / state

ಹುಲಿ ಉಗುರು ಪ್ರಕರಣ: ನಾನು ನಿರಪರಾಧಿ ಎಂದ ಧನಂಜಯ್ ಗುರೂಜಿ - ಸತ್ಯ ಶನೇಶ್ವರಸ್ವಾಮಿ ದೇವಾಲಯದ ಧರ್ಮದರ್ಶಿ ಧನಂಜಯ್ ಗುರೂಜಿ

ಹುಲಿ ಉಗುರು ಪೆಂಡೆಂಟ್​ ಧರಿಸಿದ ಪ್ರಕರಣ ಸಂಬಂಧ ನಾನು ನಿರಪರಾಧಿ ಎಂದು ಸತ್ಯ ಶನೇಶ್ವರಸ್ವಾಮಿ ದೇವಾಲಯದ ಧರ್ಮದರ್ಶಿ ಧನಂಜಯ್ ಗುರೂಜಿ ಹೇಳಿದ್ದಾರೆ.

tiger-claw-pendant-case-dhananjay-guruji-says-i-am-innocent
ಹುಲಿ ಉಗುರು ಪ್ರಕರಣ : ನಾನು ನಿರಪರಾಧಿ ಎಂದ ಧನಂಜಯ್ ಗುರೂಜಿ
author img

By ETV Bharat Karnataka Team

Published : Oct 26, 2023, 11:24 AM IST

ಹುಲಿ ಉಗುರು ಪ್ರಕರಣ : ನಾನು ನಿರಪರಾಧಿ ಎಂದ ಧನಂಜಯ್ ಗುರೂಜಿ

ತುಮಕೂರು : ನಾನು ಹುಲಿ ಉಗುರಿನ ಪೆಂಡೆಂಟ್​ ಧರಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ. ನಾನು ಯಾವುದೇ ನೈಜ ಹುಲಿ ಉಗುರು ಪೆಂಡೆಂಟ್​​ ಧರಿಸಿಲ್ಲ. ಈ ಪ್ರಕರಣದಲ್ಲಿ ನಾನು ನಿರಪರಾಧಿ ಎಂದು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಸತ್ಯ ಶನೇಶ್ವರಸ್ವಾಮಿ ದೇವಾಲಯದ ಧರ್ಮದರ್ಶಿ ಧನಂಜಯ್ ಗುರೂಜಿ ಹೇಳಿದ್ದಾರೆ.

ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದಾರೆ ಎಂಬ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ಧನಂಜಯ್​ ಗುರೂಜಿಯವನ್ನು ವಿಚಾರಣೆ ನಡೆಸಿದ್ದರು. ನಾಗರಾಜು ಎಂಬುವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಧನಂಜಯ ಅವರಿಗೆ ಸೇರಿಗೆ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಜೊತೆಗೆ ಶನೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಧನಂಜಯ ಗುರೂಜಿ ಅವರ ಬಳಿ ಇರುವ ಒಡವೆಗಳನ್ನು ಪರಿಶೀಲಿಸಿದ್ದರು. ಈ ವೇಳೆ, ಯಾವುದೇ ಹುಲಿ ಉಗುರಿನ ಪೆಂಡೆಂಟ್ ಪತ್ತೆಯಾಗಿರಲಿಲ್ಲ.

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಧನಂಜಯ್ ಗುರೂಜಿ, ಸಾಮಾಜಿಕ ಜಾಲತಾಣದಲ್ಲಿ,ಮಾಧ್ಯಮಗಳಲ್ಲಿ ಧನಂಜಯ್​ ಗುರೂಜಿ ಹುಲಿ ಉಗುರು ಧರಿಸಿದ್ದಾರೆ ಎಂದು ಸುದ್ಧಿ ಹರಿದಾಡುತ್ತಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ. 2019ರಲ್ಲಿ ನಮ್ಮ ಕ್ಷೇತ್ರದಲ್ಲಿ ನಡೆದ ಜಾತ್ರಾ ಮಹೋತ್ಸವದ ವೇಳೆ ಅಪರಿಚಿತರೊಬ್ಬರು ನನಗೆ ಆರ್ಟಿಫಿಶಿಯಲ್​ ಹುಲಿ ಉಗುರಿನ ಪೆಂಡೆಂಟ್​ನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನು ನಾನು ಎರಡು ವರ್ಷಗಳ ಕಾಲ ಧರಿಸಿದ್ದೆ. ಬಳಿಕ ಅದು ಕಂದು ಬಣ್ಣಕ್ಕೆ ತಿರುಗಿದ ನಂತರ ನಾನು ಅದನ್ನು ಧರಿಸುವುದನ್ನು ಬಿಟ್ಟೆ. ಬಳಿಕ ಅದನ್ನು ಬೇರೆಡೆ ಬಿಸಾಡಿದ್ದೇನೆ. ಆದರೆ ಇಂದು ಸಾಮಾಜಿಕ ಜಾಲತಾಣದಲ್ಲಿ ನೈಜ ಹುಲಿ ಉಗುರು ಧರಿಸಿರುವುದಾಗಿ ವೈರಲ್​ ಆಗಿದೆ. ಅದು ನೈಜ ಹುಲಿ ಉಗುರು ಅಲ್ಲ. ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯ ಅಧಿಕಾರಿಗಳಿಗೆ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಈ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ನಿರಪರಾಧಿ ಎಂದು ಹೇಳಿದ್ದಾರೆ.

ಹುಲಿ ಉಗುರು ಪೆಂಡೆಂಟ್​ ಪ್ರಕರಣ ಸಂಬಂಧ ಈಗಾಗಲೇ ಹಲವರ ವಿಚಾರಣೆ ನಡೆದಿದೆ. ಇದಕ್ಕೂ ಮೊದಲು ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಅವರನ್ನು ಹುಲಿ ಉಗುರು ಪೆಂಡೆಂಟ್​ ಧರಿಸಿದ ಸಂಬಂಧ ಅರಣ್ಯ ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ನಟ ದರ್ಶನ್​, ವಿನಯ್ ಗುರೂಜಿ, ನಿಖಿಲ್​ ಕುಮಾರಸ್ವಾಮಿ, ಜಗ್ಗೇಶ್​ ಸೇರಿದಂತೆ ಹಲವರ ವಿರುದ್ಧ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಎಂಬುವವರು ದೂರು ನೀಡಿದ್ದರು.

ಇದನ್ನೂ ಓದಿ : ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ : ನಟ ದರ್ಶನ್, ಜಗ್ಗೇಶ್ ಸೇರಿ ಹಲವರ ವಿರುದ್ಧ ದೂರು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.