ETV Bharat / state

ತುಮಕೂರು: ಗ್ಯಾಸ್ ಕಟ್ಟರ್ ಬಳಸಿ ರಾತ್ರೋರಾತ್ರಿ ಜ್ಯುವೆಲ್ಲರಿ ಶಾಪ್​ ಕಳವು

ಕಳ್ಳರು ಸುಮಾರು 5 ಲಕ್ಷ ರೂ ಬೆಲೆ ಬಾಳುವ 6 ಕೆ.ಜಿ ಬೆಳ್ಳಿಯ ವಸ್ತುಗಳನ್ನು ದೋಚಿದ್ದಾರೆ.

Thieves robbed a jewelery shop overnight using a gas cutter
ಗ್ಯಾಸ್ ಕಟ್ಟರ್ ಬಳಸಿ ರಾತ್ರೋರಾತ್ರಿ ಜ್ಯುವೆಲ್ಲರಿ ಶಾಪ್​ಗೆ ಕನ್ನ ಹಾಕಿದ ಕಳ್ಳರು
author img

By ETV Bharat Karnataka Team

Published : Oct 13, 2023, 6:28 PM IST

Updated : Oct 13, 2023, 8:08 PM IST

ಸಿಸಿಟಿವಿ ಕ್ಯಾಮರಾ ದೃಶ್ಯ

ತುಮಕೂರು: ಗ್ಯಾಸ್ ಕಟ್ಟರ್ ಬಳಸಿ ರಾತ್ರೋರಾತ್ರಿ ಜ್ಯುವೆಲ್ಲರಿ ಶಾಪ್​ಗೆ ಕನ್ನ ಹಾಕಿದ ಕಳ್ಳರು, ಸುಮಾರು ಐದು ಲಕ್ಷ ರೂಪಾಯಿ ಬೆಲೆ ಬಾಳುವ ಅಂದಾಜು 6 ಕೆ.ಜಿ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಗುಬ್ಬಿ ತಾಲೂಕಿನ ಕೆ.ಜಿ.ಟೆಂಪಲ್ ಗ್ರಾಮದಲ್ಲಿ ನಡೆದಿದೆ. ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಜಿ.ಟೆಂಪಲ್ ಗ್ರಾಮದ ಮೋಹನ್ ಲಾಲ್ ಮಾಲೀಕತ್ವದ ಭವಾನಿ ಜ್ಯುವೆಲ್ಲರಿ ಶಾಪ್​ನಲ್ಲಿ ಕಳ್ಳತನ ನಡೆದಿದೆ.

ರಾತ್ರಿ ಒಂದು ಗಂಟೆ ಸಮಯದಲ್ಲಿ ಅಂಗಡಿ ಮಾಲೀಕ ಮೋಹನ್ ಲಾಲ್ ಮೊಬೈಲ್​ಗೆ ಅಲಾರ್ಮ್ ಸೆನ್ಸಾರ್ ಎಚ್ಚರಿಕೆ ಕೊಟ್ಟಿದ್ದು ಹೆಣ್ಣೂರು ನಿವಾಸಿ ಅಂಗಡಿ ಮಾಲೀಕ ತಕ್ಷಣ ಕೆ.ಜಿ.ಟೆಂಪಲ್ ಸ್ನೇಹಿತರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಅಂಗಡಿ ಬಳಿ ಬಂದವರು ಗಲಾಟೆ ಮಾಡಲಾಗಿ ಹಿಂಬದಿಯಿಂದ ಕಳ್ಳರು ಓಡಿ ಹೋಗಿದ್ದಾರೆ ಎನ್ನಲಾಗಿದೆ.

ತಡರಾತ್ರಿ ಜ್ಯುವೆಲ್ಲರಿ ಶಾಪ್​ಗೆ ನುಗ್ಗಿರುವ ಆರೇಳು ಮಂದಿ ಮುಸುಕುಧಾರಿಗಳ ಗುಂಪಿನ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜ್ಯುವೆಲ್ಲರಿ ಶಾಪ್​ನಲ್ಲಿದ್ದ ಸುಮಾರು ಆರೇಳು ಕೆ.ಜಿ. ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಹೋಗಿರುವ ಪ್ರಕರಣ ನಡೆದಿದೆ. ಈ ಮಧ್ಯೆ ಚಿನ್ನಾಭರಣ ಲಾಕರ್‌ನಲ್ಲಿದ್ದ ಕಾರಣ ಲಕ್ಷಾಂತರ ಬೆಲೆಯ ಬಂಗಾರ ಒಡವೆಗಳು ಉಳಿದುಕೊಂಡಿದೆ.

ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಮಾಲೀಕನಿಗೆ ಗುಂಡು ಹಾರಿಸಿ, ಜ್ಯುವೆಲ್ಲರಿ ದರೋಡೆ: ಚಿನ್ನದ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ, ಸುಮಾರು 1 ಕೆಜಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನ ಬ್ಯಾಡರಹಳ್ಳಿಯ ಪೈಪ್‌ಲೈನ್​ ರಸ್ತೆಯಲ್ಲಿ ನಡೆದಿತ್ತು. ಹೈದರಾಬಾದ್​ಗೆ ವಿಮಾನ ಹತ್ತುವ ಯತ್ನದಲ್ಲಿದ್ದ ಈ ಪ್ರಕರಣದ ಆರೋಪಿಯೋರ್ವನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಆತನಿಂದ ಸ್ವಲ್ಪ ಪ್ರಮಾಣದ ಚಿನ್ನಾಭರಣ ವಶಕ್ಕೆ ಪಡೆದಿದ್ದರು.

ದ್ವಿಚಕ್ರ ವಾಹನಗಳಲ್ಲಿ ಮಾರಕಾಸ್ತ್ರಗಳಸಹಿತ ಬಂದಿದ್ದ ಆರೋಪಿಗಳು ಬ್ಯಾಡರಹಳ್ಳಿ ವ್ಯಾಪ್ತಿಯ ವಿನಾಯಕ ಜ್ಯುವೆಲ್ಲರಿ ಶಾಪ್​ಗೆ ನುಗ್ಗಿ, ಮಾಲೀಕ ಮನೋಜ್​ ಲೋಹರ್​ ಅವರನ್ನು ಬೆದರಿಸಿ, ದರೋಡೆಗೆ ಯತ್ನಿಸಿದ್ದರು. ಮನೋಜ್​ ಅವರು, ದರೋಡೆಕೋರರನ್ನು ತಡೆಯಲು ಯತ್ನಿಸಿದಾಗ ಮಾಲೀಕನ​ ತೊಡೆಗೆ ಗುಂಡು ಹಾರಿಸಿ, ಆರೋಪಿಗಳು ಅಂಗಡಿಯಲ್ಲಿದ್ದ ಸುಮಾರು 1 ಕೆಜಿಯಷ್ಟು ಚಿನ್ನಾಭರಣ ದೋಚಿದ್ದರು. ಮಾಲೀಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ: ಜ್ಯುವೆಲ್ಲರಿ ಶಾಪ್ ದರೋಡೆ ಪ್ರಕರಣ: ಹೈದರಾಬಾದ್​ನತ್ತ ಹೊರಟಿದ್ದ ಆರೋಪಿ ಸೆರೆ

Last Updated : Oct 13, 2023, 8:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.