ತುಮಕೂರು: ಹಲವು ದಿನಗಳಿಂದ ಜನ-ಜಾನುವಾರುಗಳ ಮೇಲೆ ದಾಳಿ ಮಾಡಿ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದೆ.
ಕುಣಿಗಲ್ ತಾಲೂಕು ಯಡಿಯೂರು ಹೋಬಳಿ ನಡೆಮಾವಿನಪುರ ಹಣೆಹಂತ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.
ದಾಳಿ ಮಾಡುತ್ತಿರುವ ಚಿರತೆಯನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದ ಹಿನ್ನೆಲೆ ಗ್ರಾಮದ ಶಂಕರ್ ಎಂಬುವರ ತೋಟದಲ್ಲಿ ಬೋನು ಇರಿಸಲಾಗಿತ್ತು. ಅಂದಾಜು 3 ವರ್ಷದ ಗಂಡು ಚಿರತೆಯಾಗಿದ್ದು, ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ.