ತುಮಕೂರು: ಚಂದ್ರಗ್ರಹಣದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ.
ವಿಧಿವಿಧಾನದಂತೆ ಸಂಜೆ 5ಗಂಟೆ ವೇಳೆಗೆ ದೇವಸ್ಥಾನದ ಪುರೋಹಿತರು ಬಾಗಿಲು ಹಾಕಿದರು. ಬುಧವಾರ ಬೆಳಗ್ಗೆ 7ಗಂಟೆ ವೇಳೆಗೆ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ಕೆಲ ವಿಧಿವಿಧಾನಗಳನ್ನು ಪೂರೈಸಿದ ನಂತರ ಮಹಾಲಕ್ಷ್ಮೀ ದೇಗುಲದ ಬಾಗಿಲನ್ನು ತೆರೆಯಲಾಗುತ್ತೆ. ಅಲ್ಲಿಯವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ದೇಗುಲದ ಎದುರು ಬೋರ್ಡ್ ಕೂಡ ಹಾಕಲಾಗಿದೆ.