ತುಮಕೂರು: ಬಂಗಾರಪೇಟೆ ತಹಶೀಲ್ದಾರ್ ಬಿ ಕೆ ಚಂದ್ರಮೌಳೇಶ್ವರ ಅವರ ಪಾರ್ಥಿವ ಶರೀರವನ್ನು ಇಂದು ತುಮಕೂರಿಗೆ ತರಲಾಗಿದೆ.
ಅವರ ಪಾರ್ಥಿವ ಶರೀರವನ್ನ ನಗರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಶಾಸಕ ಜ್ಯೋತಿ ಗಣೇಶ್, ಮೃತರ ಅಂತಿಮ ದರ್ಶನ ಪಡೆದರು. ಇದೇ ವೇಳೆ, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಸಕ ಜ್ಯೋತಿ ಗಣೇಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮೃತರ ಅಂತಿಮ ದರ್ಶನ ಪಡೆದರು. ಮೃತ ಚಂದ್ರಮೌಳೇಶ್ವರ ಅವರ ಹುಟ್ಟೂರಾದ ಗುಬ್ಬಿ ತಾಲೂಕಿನ ಕದಿರೇಗೌಡನಪಾಳ್ಯದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ವಿವಾದಿತ ಜಮೀನು ಸರ್ವೆ ಕಾರ್ಯಕ್ಕೆ ತೆರಳಿದ್ದ ವೇಳೆ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಬಿ ಕೆ ಚಂದ್ರಮೌಳೇಶ್ವರ ಅವರನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು.