ತುಮಕೂರು: ತಾಲೂಕಿನ ಕೋಡಿಮುದ್ದನಹಳ್ಳಿಯಲ್ಲಿ ಕೋವಿಡ್ ಕೇರ್ ಸೆಂಟರ್ಅನ್ನು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಆರಂಭಿಸಿದ್ದಾರೆ. ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಅವರ ಕಡೆಯ ಸ್ವಯಂ ಸೇವಕರು ಹೇಳಿಕೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸುರೇಶ್ ಗೌಡ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರದ ಹಾಸ್ಟೆಲ್ನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಬ್ಬರು ವೈದ್ಯರನ್ನು, ವೈದ್ಯಕೀಯ ಸಿಬ್ಬಂದಿಯನ್ನು ಸರ್ಕಾರವೇ ನೇಮಿಸಿ, ಕೇಂದ್ರವನ್ನು ಸರ್ಕಾರವೇ ನಡೆಸುತ್ತಿದೆ. ಸೋಂಕಿತರಿಗೆ ಆಹಾರವನ್ನು ಸರ್ಕಾರವೇ ನೀಡುತ್ತಿದೆ. ಹೀಗಿದ್ದರೂ ಶಾಸಕ ಗೌರಿಶಂಕರ್ ಕಡೆಯ ಸ್ವಯಂ ಸೇವಕರು ಎಂದು ಹೇಳಿಕೊಂಡು ಬಂದಿರುವ ಕೆಲವರು ಪ್ರತಿಯೊಂದಕ್ಕೂ ಪ್ರಶ್ನಿಸುತ್ತಿದ್ದಾರೆ ಎಂದು ಶಾಸಕ ಸುರೇಶ್ ಗೌಡ ಕೇಂದ್ರದ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅವರು ಸ್ವಯಂ ಸೇವಕರೆಂದರೆ ಅವರಿಗೆ ಬ್ಯಾಡ್ಜ್ ಕೊಡುವಂತೆ ತಹಶೀಲ್ದಾರ್ ಮೋಹನ್ಗೆ ತಾಕೀತು ಮಾಡಿದರು.
ಇದನ್ನೂ ಓದಿ: ESI ಆಸ್ಪತ್ರೆಗಳ ಅವಶ್ಯಕತೆ ಪೂರೈಕೆಗೆ ಜಿಲ್ಲಾ ಮಟ್ಟದ ಸಮಿತಿ ರಚನೆ: ಸಚಿವ ಶಿವರಾಂ ಹೆಬ್ಬಾರ್
ಕೇಂದ್ರಕ್ಕೆ ತರಕಾರಿ, ಔಷಧಿಗಳನ್ನು ನೀಡುವ ಮೂಲಕ ಸೇವೆ ಮಾಡಲು ಬಂದಿರುವವರಿಗೆ ಗೌರವಿಸುತ್ತೇವೆ. ಆದ್ರೆ ಈ ಕೇಂದ್ರದಲ್ಲಿ ರಾಜಕಾರಣವೇಕೆ ಎಂದು ಸುರೇಶ್ ಗೌಡ ಪ್ರಶ್ನಿಸಿದರು. ಒಟ್ಟಾರೆ ಸರ್ಕಾರ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿದ್ದು, ಶೀಘ್ರ ಗುಣಮುಖರಾಗುತ್ತೇವೆ ಎಂದು ಸೋಂಕಿತರು ನಂಬಿರುತ್ತಾರೆ. ಆದ್ರೆ ಇಲ್ಲಿ ಬಂದು ರಾಜಕಾರಣ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.