ತುಮಕೂರು: ನಮ್ಮ ಸರ್ಕಾರದ ಅವಧಿಯ ನಂತರ ಶಿರಾದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಹೀಗಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಶಿರಾ ಜನ ಎಚ್ಚರವಹಿಸಿ ಮತದಾನ ಮಾಡಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಶಿರಾ ಜನತೆಗೆ ಟಿ.ಬಿ.ಜಯಚಂದ್ರರ ನಾಯಕತ್ವದ ಅವಶ್ಯಕತೆಯಿದೆ. ಅವರ ಅವಧಿಯ ನಂತರ ತಾಲೂಕಿನಲ್ಲಿ ಚೆಕ್ ಡ್ಯಾಂ, ನೀರಾವರಿ, ರಸ್ತೆ ನಿರ್ಮಾಣದಂತಹ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ. ಹೀಗಾಗಿ ಮತ್ತೊಮ್ಮೆ ಜಯಚಂದ್ರ ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಬೇಕು.
ಆರ್.ಆರ್.ನಗರದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳ ಮೂಲಕ ಹಣ ಹಂಚಿ ವಾಮಮಾರ್ಗದಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸಲಾಗಿದೆ. ಈಗ ಅದೇ ಉಪಾಯವನ್ನು ಇಲ್ಲಿಯೂ ಪ್ರಯೋಗಿಸಲಾಗುತ್ತಿದೆ. ಆದರೆ, ಶಿರಾ ಜನತೆ ಅದಕ್ಕೆಲ್ಲಾ ಮಣಿಯದೆ ಪ್ರಾಮಾಣಿಕವಾಗಿ ಮತದಾನ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.