ETV Bharat / state

ಮಾಜಿ ಸಚಿವ ಲಕ್ಷ್ಮಿನರಸಿಂಹ ಅವರು ಅನೇಕರ ಬೆಳವಣಿಗೆಗೆ ಕಾರಣರಾಗಿದ್ದಾರೆ:ಸಿದ್ದರಾಮಯ್ಯ - ಮಾಜಿ ಸಚಿವ ಲಕ್ಷ್ಮಿನರಸಿಂಹ

ಮಾಜಿ ಸಚಿವ ಲಕ್ಷ್ಮಿನರಸಿಂಹ ಅವರು ಅನೇಕರ ಬೆಳವಣಿಗೆಗೆ ಕಾರಣರಾಗಿದ್ದಾರೆ- ಜೆಸಿ ಮಾಧುಸ್ವಾಮಿ ತುಮಕೂರು ಹಾಲು ಒಕ್ಕೂಟ ಮಹಾಮಂಡಳಿಯ ಅಧ್ಯಕ್ಷರಾಗಿ ನೇಮಕವಾಗಲು ಲಕ್ಷ್ಮಿನರಸಿಂಹ ಅವರೇ ಕಾರಣೀಕರ್ತರಾಗಿದ್ದರು-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Former Chief Minister Siddaramaiah
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Dec 24, 2022, 9:21 PM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ತುಮಕೂರು: ಮಾಜಿ ಸಚಿವ ಲಕ್ಷ್ಮಿನರಸಿಂಹ ಅವರು ಅನೇಕರ ಬೆಳವಣಿಗೆಗೆ ಕಾರಣರಾಗಿದ್ದಾರೆ. ಜೆ ಸಿ ಮಾಧುಸ್ವಾಮಿ ತುಮಕೂರು ಹಾಲು ಒಕ್ಕೂಟ ಮಹಾಮಂಡಳಿಯ ಅಧ್ಯಕ್ಷರಾಗಿ ನೇಮಕವಾಗಲು ಲಕ್ಷ್ಮಿನರಸಿಂಹ ಅವರೇ ಕಾರಣೀಕರ್ತರಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪಶುಸಂಗೋಪನ ಖಾತೆ ಸಚಿವನಾಗಿದ್ದ ಸಂದರ್ಭದಲ್ಲಿ ಮಾಜಿ ಸಚಿವ ಲಕ್ಷ್ಮಿನರಸಿಂಹ ಅವರು ಅಂದಿನ ಮಂತ್ರಿಯಾಗಿದ್ದ ಎಸ್ ಆರ್ ಬೊಮ್ಮಾಯಿ ಮೂಲಕ ನನಗೆ ಶಿಪಾರಸ್ಸು ಮಾಡಿಸಿ ಮಾಧುಸ್ವಾಮಿಯವರನ್ನು ತುಮಕೂರು ಹಾಲು ಒಕ್ಕೂಟ ಮಹಾಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿಸಿದ್ದರು ಎಂದರು.

ನಂತರ ಮಾತನಾಡಿ ಮಾಧುಸ್ವಾಮಿ ರಾಜಕೀಯವಾಗಿ ಬೆಳೆಯಲು ತುಮಕೂರು ಹಾಲು ಒಕ್ಕೂಟ ಕೂಡ ಸಹಕಾರಿಯಾಗಿದೆ. ಮಾಜಿ ಸಚಿವ ಲಕ್ಷ್ಮಿನರಸಿಂಹ ಅವರು ಹಾಗೂ ನಾನು ಆಗಾಗ ಸಮಾಜದ ಕೆಳಸ್ತರದ ಜನರ ಸ್ಥಿತಿಗತಿಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳನ್ನು ಮಾಡುತ್ತಿದ್ದೆವು. ಹೀಗಾಗಿ ಇಂದಿಗೂ ಕೂಡ ಅವರು ನಮ್ಮ ಹೋರಾಟದ ನೆನಪಿನ ಬುತ್ತಿ ಹಾಗೂ ಚಿಂತನೆಗಳಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮೇಶ್, ಸಚಿವರಾದ ಮಾಧುಸ್ವಾಮಿ, ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು ಭಾಗವಹಿಸಿದ್ದರು.

ಇದನ್ನೂ ಓದಿ:ತುಮಕೂರು: ಹುಚ್ಚುನಾಯಿ ಕಡಿತಕ್ಕೆ ವಿದ್ಯಾರ್ಥಿಗಳು ಸೇರಿ 17 ಮಂದಿಗೆ ಗಾಯ..ಇಬ್ಬರ ಸ್ಥಿತಿ ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.