ETV Bharat / state

ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ 'ದಾಸೋಹ ದಿನ'ವಾಗಿ ಘೋಷಿಸಲಾಗುವುದು: ಸಿಎಂ ಬಿಎಸ್​ವೈ - CM BSY Announcement

ಅನ್ನ ದಾಸೋಹದ ಜೊತೆಗೆ ಅಕ್ಷರ ಕಲಿಸಿದ ಸಿದ್ದ ಗಂಗಾ ಶ್ರೀಗಳು ಪ್ರಾತಃಸ್ಮರಣೀಯ. ನಡೆದಾಡುವ ದೇವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

shivakumara swamiji death anniversary programme at siddaganga math
ಸಿದ್ಧಗಂಗಾಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ
author img

By

Published : Jan 21, 2021, 3:13 PM IST

Updated : Jan 21, 2021, 3:27 PM IST

ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲು ಘೋಷಣೆಗೆ ಆದೇಶ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.

ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ 'ದಾಸೋಹ ದಿನ'ವಾಗಿ ಘೋಷಿಸಲಾಗುವುದು: ಸಿಎಂ ಬಿಎಸ್​ವೈ

ಸಿದ್ದಗಂಗಾ ಮಠದಲ್ಲಿ ನಡೆದ ದ್ವಿತೀಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಿಎಸ್​ವೈ, ಅನ್ನ ದಾಸೋಹದ ಜೊತೆಗೆ ಅಕ್ಷರ ಕಲಿಸಿದ ಸಿದ್ದಗಂಗಾ ಶ್ರೀಗಳು ಪ್ರಾತಃಸ್ಮರಣೀಯ ಎಂದು ಬಣ್ಣಿಸಿದರು.

ಶಿವಕುಮಾರ ಶ್ರೀಗಳ ಬದುಕು, ಸಾಧನೆ ಸಾರುವ ಉದ್ದೇಶದಿಂದ ಪೂಜ್ಯರ ಹುಟ್ಟೂರಿನಲ್ಲಿ 111 ಅಡಿ ಎತ್ತರದ ಪುತ್ಥಳಿಯನ್ನು ಮತ್ತು ಗ್ರಾಮದ ಅಭಿವೃದ್ಧಿಗೆ 25 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ವೀರಾಪುರ ಗ್ರಾಮ ತೀರ್ಥ ಕ್ಷೇತ್ರವಾಗಬೇಕು. ಕೋಟ್ಯಂತರ ಭಕ್ತರಿಗೆ ದೇವರಾಗಿದ್ದಾರೆ. ಶ್ರೀ ಶಿವಕುಮಾರ ಶ್ರೀಗಳು ಅನ್ನ, ಅರಿವು, ಆಶ್ರಯ ಎಂಬ ತ್ರಿವಿಧ ದಾಸೋಹ ನೀಡಿದ್ದಾರೆ ಎಂದರು.

ಓದಿ:111 ಅಡಿ ಎತ್ತರದ ಶಿವಕುಮಾರ ಶ್ರೀಗಳ ಪ್ರತಿಮೆ ನಿರ್ಮಾಣದ ಗ್ರಾಫಿಕ್ಸ್ ಅನಾವರಣ

ಜಾತಿ, ಧರ್ಮ ಭೇದವಿಲ್ಲದೆ ಶಿಕ್ಷಣ ನೀಡಿ ಹಲವರ ಬಾಳಿನ ಬೆಳಕಾಗಿದ್ದಾರೆ. ನಡೆದಾಡುವ ದೇವರು ಶಿವಕುಮಾರ ಶ್ರೀಗಳ ಆಶೀರ್ವಾದದಿಂದ ನಮ್ಮ ಕಷ್ಟಕಾರ್ಪಣ್ಯಗಳು ದೂರವಾಗಲಿವೆ ಎಂದು ಬಿಎಸ್​ವೈ ಆಶಿಸಿದರು.

Last Updated : Jan 21, 2021, 3:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.