ETV Bharat / state

ಕೊರೊನಾ ಸೋಂಕಿತ 13 ವರ್ಷದ ಬಾಲಕನ ಟ್ರಾವೆಲ್ ಹಿಸ್ಟರಿ ಕಲೆ ಹಾಕಲು ಹರಸಾಹಸ..

author img

By

Published : Mar 31, 2020, 9:53 PM IST

ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಈಗಾಗಲೇ ಕೋವಿಡ್-19ನಿಂದ ಮೃತಪಟ್ಟಿರೋ ವ್ಯಕ್ತಿಯ ಸಂಬಂಧಿಕರು ಮತ್ತು ಆತನ ಮನೆಯ ಸುತ್ತಮುತ್ತಲ ಪ್ರದೇಶದ ಜನರನ್ನ ತೀವ್ರ ನಿಗಾಇರಿಸಲಾಗಿದೆ.

searching for  corona affected boy travelling history
ಕೊರೊನಾ ಸೋಂಕಿತನ ಟ್ರಾವೆಲ್ ಹಿಸ್ಟರಿ ಕಲೆ ಹಾಕಲು ಹರಸಾಹಸ

ತುಮಕೂರು : ಶಿರಾ ಪಟ್ಟಣದಲ್ಲಿ 13 ವರ್ಷದ ಬಾಲಕನಲ್ಲಿಯೂ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಆದರೆ, ಬಾಲಕ ಎಲ್ಲೆಲ್ಲಿ ತಿರುಗಾಡಿದ್ದಾನೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಕೊರೊನಾ ಸೋಂಕಿತನ ಟ್ರಾವೆಲ್ ಹಿಸ್ಟರಿ ಕಲೆ ಹಾಕಲು ಹರಸಾಹಸ..

ಬಾಲಕ ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ. ನಿರಂತರವಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದನಂತೆ. ಇದ್ರಿಂದಾಗಿ ಶಿರಾ ಪಟ್ಟಣ ಸಂಪೂರ್ಣ ಲಾಕ್‌ಡೌನ್ ಆಗಿದೆ. ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಈಗಾಗಲೇ ಕೋವಿಡ್-19ನಿಂದ ಮೃತಪಟ್ಟಿರೋ ವ್ಯಕ್ತಿಯ ಸಂಬಂಧಿಕರು ಮತ್ತು ಆತನ ಮನೆಯ ಸುತ್ತಮುತ್ತಲ ಪ್ರದೇಶದ ಜನರನ್ನ ತೀವ್ರ ನಿಗಾಇರಿಸಲಾಗಿದೆ. ಕೊರೊನಾ ಸೋಂಕಿತ ಮೃತ ವೃದ್ಧನ ಮನೆಯ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಹೈ-ಅಲರ್ಟ್ ಮಾಡಲಾಗಿದೆ.

ಮನೆಯ ಸುತ್ತಲಿನ 7 ಮನೆಗಳಲ್ಲಿನ ಜನರನ್ನು ಶಿರಾ ಪಟ್ಟಣದ ಹೊರವಲಯದಲ್ಲಿರುವ ಬುವನಹಳ್ಳಿ ಸಮೀಪದ ವಸತಿ ಶಾಲೆಯಲ್ಲಿಟ್ಟು ಅವರನ್ನು ನೋಡಿಕೊಳ್ಳಲಾಗ್ತಿದೆ. ಮೃತ ವ್ಯಕ್ತಿಯ ಮನೆ ಎದುರು ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯನ್ನೂ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಮೃತ ವ್ಯಕ್ತಿಯ ಮಗ ಅಂಗಡಿಗೆ ಬಂದು ಹೋಗಿದ್ದ. ಆದರೆ, ನಾವ್ಯಾರೂ ಅವರ ಮನೆಗೆ ಹೋಗಿರಲಿಲ್ಲ. ಹೀಗಾಗಿ ನನ್ನ ಆರೋಗ್ಯದ ಮೇಲೆಯೂ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾವಹಿಸಿದ್ದಾರೆ ಎಂದು ಅಂಗಡಿ ಮಾಲೀಕ 'ಈಟಿವಿ ಭಾರತ'ಕ್ಕೆ ಸ್ಟಷ್ಟಪಡಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.