ತುಮಕೂರು: ಬುಧವಾರ ರಾತ್ರಿ ರೌಡಿಗಳ ಗುಂಪೊಂದು ರೌಡಿಶೀಟರ್ನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಮಂಜು ಅಲಿಯಾಸ್ ಆರ್ಎಕ್ಸ್ ಮಂಜ (31) ಕೊಲೆಯಾದ ರೌಡಿಶೀಟರ್. ತುಮಕೂರು ನಗರದ ಎಸ್ಐಟಿ ಬಡವಾವಣೆಯ ಮಂಜುಶ್ರೀ ಬಾರ್ ಎದುರು ಮತ್ತೊಂದು ರೌಡಿ ಗುಂಪು ಮಂಜುನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದೆ.

ರಾತ್ರಿ ಸ್ನೇಹಿತರ ಜೊತೆ ಮಂಜು ಹೊರಗೆ ಹೋಗಿ ಮನೆಗೆ ವಾಪಸ್ ಬರುತ್ತಿರುವಾಗ ರೌಡಿ ಗುಂಪೊಂದು ಅಟ್ಯಾಕ್ ಮಾಡಿದೆ. ಬಳಿಕ ದುಷ್ಕರ್ಮಿಗಳು ಮನಸೋಯಿಚ್ಛೆ ಮಂಜು ಹೊಟ್ಟೆಗೆ ಚಾಕುವಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿರುವ ರೌಡಿಗಳ ಗುಂಪು ಯಾವುದೆಂದು ತಿಳಿದಿಲ್ಲ.

ಈ ಸಂಬಂಧ ಎನ್ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.