ತುಮಕೂರು: ತಾಲ್ಲೂಕು ಬೆಳಗುಂಬದ ಬಸ್ ಸ್ಟಾಪ್ನಲ್ಲಿ ನಡೆದ ರೌಡಿ ಕೊಲೆ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆಗೊಳಪಡಿಸಬೇಕು ಎಂದು ಶಾಸಕ ಗೌರಿಶಂಕರ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೂಜಾಟ, ಮದ್ಯ ಮಾರಾಟ ಹಾವಳಿ ಹೆಚ್ಚಾಗಿದೆ. ಜೂಜಾಟದ ವೇಳೆ ನಡೆದ ಗಲಾಟೆಯಿಂದ ಈ ಕೊಲೆ ನಡೆದಿದೆ ಎಂದರು.
ಟೆಂಪರ್ ರಾಜ ಎಂಬಾತನಿಗೆ ಉದ್ದೇಶ ಪೂರ್ವಕವಾಗಿ ಶೂಟ್ ಮಾಡಲಾಗಿದೆ. ಚಟ್ಟ ಕುಮಾರನ ಕೊಲೆಯ ಹಿಂದಿರುವ ಪ್ರಭಾವಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ಅಲ್ಲದೇ ರಾಜಾನ ಮೇಲೆ ನಡೆದ ಪೊಲೀಸ್ ಫೈರಿಂಗ್ ನಕಲಿಯಾಗಿದೆ. ಈ ಕೊಲೆಯ ಹಿಂದೆ ರಾಜಕೀಯ ವ್ಯಕ್ತಿಯ ಕೈವಾಡವಿದೆ ಎಂದು ದೂರಿದ್ರು.