ತುಮಕೂರು: ಲಾಕ್ಡೌನ್ ಹಿನ್ನೆಲೆ ನಗರದ ಸರ್ಕಾರಿ ವಸತಿ ನಿಲಯಗಳಲ್ಲಿ ಇರಿಸಲಾಗಿರುವ ನಿರಾಶ್ರಿತರು ತಮ್ಮ ಊರುಗಳಿಗೆ ಹೋಗಲು ಅವಕಾಶ ಕೊಡುವಂತೆ ಸಾಮಾಜಿಕ ಅಂತರವಿಲ್ಲದೇ ಗುಂಪು ಗುಂಪಾಗಿ ನಿಂತು ಒತ್ತಾಯಿಸಿದ್ದಾರೆ.
ಇವರು ವಸತಿ ನಿಲಯಗಳ ಎದುರು ಏಕಾಏಕಿ ತಮ್ಮ ವಸ್ತುಗಳೊಂದಿಗೆ ಜಮಾಯಿಸಿದ್ದನ್ನು ನೋಡಿ ಅಧಿಕಾರಿಗಳು ಮತ್ತು ಪೊಲೀಸರು ಕೆಲಕಾಲ ವಿಚಲಿತರಾಗಿದ್ದಾರೆ. ಈ ನಡುವೆ ನಿಮ್ಮನ್ನು ಕಳುಹಿಸಿಕೊಟ್ಟರೂ ಸಂಬಂಧಪಟ್ಟ ಜಿಲ್ಲೆಗಳಿಗೆ ಪ್ರವೇಶಿಸಲು ಅವಕಾಶವಿಲ್ಲ. ಪುನಃ ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಪರಿಸ್ಥಿತಿ ಅರಿತು ಕಳುಹಿಸಿಕೊಡುವುದಾಗಿ ಅಧಿಕಾರಿಗಳು ನಿರಾಶ್ರಿತರ ಮನವೊಲಿಸಿದ್ದಾರೆ.
ಬಹುತೇಕ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹೆಚ್ಚು ಕಾರ್ಮಿಕರೇ ನಿರಾಶ್ರಿತರ ಕೇಂದ್ರದಲ್ಲಿ ತಂಗಿದ್ದಾರೆ. ನಗರದ ಕೋತಿತೋಪು ರಸ್ತೆಯಲ್ಲಿರುವ ಎರಡು ನಿರಾಶ್ರಿತರ ಕೇಂದ್ರದಲ್ಲಿ 316 ಜನರಿ ಆಶ್ರಯ ನೀಡಲಾಗಿದೆ. ಈ ಪೈಕಿ 108 ಮಹಿಳೆಯರು, 24 ಮಕ್ಕಳು ಸೇರಿದಂತೆ ಪುರುಷರು ಇದ್ದಾರೆ.