ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದ ಅರಣ್ಯಪ್ರದೇಶದಲ್ಲಿ ಪುನುಗು ಬೆಕ್ಕು ನೈಸರ್ಗಿಕವಾಗಿ ಸಾವನ್ನಪ್ಪಿದೆ ಎಂದು ವಲಯ ಅರಣ್ಯಾಧಿಕಾರಿ ರಾಕೇಶ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ವಿವಿಧ ಅರಣ್ಯ ಪ್ರದೇಶದಲ್ಲಿ ಹೇರಳವಾಗಿ ಪುನುಗುಬೆಕ್ಕುಗಳು ವಾಸಿಸುತ್ತಿವೆ. ವಿವಿಧ ಅರಣ್ಯ ಪ್ರದೇಶದಲ್ಲಿ ಸಿಗುವ ಬೇರುಗಳು, ಇಲಿ, ಕೀಟಗಳು ಹಾಗೂ ಹಾವುಗಳನ್ನು ತಿಂದು ಇವುಗಳು ಜೀವಿಸುತ್ತವೆ.
ಪುನುಗು ಬೆಕ್ಕುಗಳಂದ್ರೆ?
ಪ್ರಪಂಚದಲ್ಲಿ ಸುಮಾರು 7 ತರಹದ ಪುನುಗು ಬೆಕ್ಕುಗಳನ್ನು ಕಾಣಬಹುದಾಗಿದ್ದು, ತುಮಕೂರು ಜಿಲ್ಲೆಯಲ್ಲಿ 'ಇಂಡಿಯನ್ ಸೆವೆಟ್' ಎಂದು ಕರೆಯಲ್ಪಡುವ ಪುನುಗುಬೆಕ್ಕು ವಾಸಿಸುತ್ತವೆ ಎಂಬ ಮಾಹಿತಿ ದೊರೆತಿದೆ.
ಪುನುಗುಬೆಕ್ಕಿನ ಚರ್ಮ ಮತ್ತು ಕೆಲವೊಂದು ದೇಹದ ಭಾಗಗಳನ್ನು ಔಷಧವಾಗಿ ಕೆಲವರು ಬಳಸುತ್ತಾರೆ. ಹೀಗಾಗಿ ಬೇಟೆಗಾರರಿಂದ ಅವುಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಶಿಸ್ತಿನ ಕ್ರಮ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದರು.