ETV Bharat / state

ಸಂವಿಧಾನ ದತ್ತ ಕರ್ತವ್ಯಗಳನ್ನು ಪ್ರತಿಯೊಬ್ಬರು ಪಾಲಿಸಬೇಕು: ಕುಲಪತಿ ವೈ.ಎಸ್. ಸಿದ್ದೇಗೌಡ - Prof. Y.S Siddhagowda Statement

ಸಂವಿಧಾನದಲ್ಲಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರು ಪಾಲಿಸಬೇಕಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ವೈ.ಎಸ್. ಸಿದ್ದೇಗೌಡ ತಿಳಿಸಿದರು.

Prof. Y.S  Siddhagowda  Statement
ಸಂವಿಧಾನದಲ್ಲಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರು ಪಾಲಿಸಬೇಕಿದೆ: ಕುಲಪತಿ ವೈ.ಎಸ್. ಸಿದ್ದೇಗೌಡ
author img

By

Published : Nov 26, 2019, 3:21 PM IST

ತುಮಕೂರು: ನೀತಿ- ನಿಯಮ, ಯೋಜನೆಗಳು ಅಂದಿನ ಪ್ರಸ್ತುತತೆಗೆ ಪಕ್ವವಾಗಿರಬೇಕಿದೆ. ಇಲ್ಲವಾದಲ್ಲಿ ಆ ಕಾನೂನು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಸಂವಿಧಾನವನ್ನು ಆಯಾ ಕಾಲ ಘಟ್ಟಕ್ಕೆ ತಿದ್ದುಪಡಿ ಮಾಡುವ ಮೂಲಕ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗೆ ಸರಿದೂಗುವಂತೆ ಮಾಡಲಾಗುತ್ತಿದೆ. ಸಂವಿಧಾನದಲ್ಲಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರು ಪಾಲಿಸಬೇಕಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ವೈ.ಎಸ್. ಸಿದ್ದೇಗೌಡ ತಿಳಿಸಿದರು.

ಸಂವಿಧಾನದಲ್ಲಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರು ಪಾಲಿಸಬೇಕಿದೆ: ಕುಲಪತಿ ವೈ.ಎಸ್. ಸಿದ್ದೇಗೌಡ

ಜಿಲ್ಲಾಡಳಿತ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ "ಒಂದು ದೇಶ ಒಂದು ಸಂವಿಧಾನ" ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸದೃಢವಾಗಿ ಮಾಡುವ ಕಾರ್ಯದಲ್ಲಿ ಸಫಲತೆಯನ್ನು ಕಾಣುತಿದ್ದರೆ ಅದಕ್ಕೆ ಸಂವಿಧಾನವೇ ಕಾರಣ. 70 ವರ್ಷದ ಹಿಂದೆ ಬಂದಂತಹ ಸಂವಿಧಾನ ಆಗಿನ ಸಾಮಾಜಿಕ, ಆರ್ಥಿಕ ಹಿನ್ನಲೆಯ ಆಧಾರದ ಮೇಲೆ ರಚನೆ ಆಗಿರುವಂತಹದ್ದು. ಈಗ ಕಳೆದಿರುವ ವರ್ಷಗಳಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ. ನೀತಿ, ನಿಯಮ, ಯೋಜನೆಗಳು ಅಂದಿನ ಪ್ರಸ್ತುತತೆಗೆ ಪಕ್ವವಾಗಿರಬೇಕಿದೆ. ಇಲ್ಲವಾದಲ್ಲಿ ಆ ಕಾನೂನು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಸಂವಿಧಾನವನ್ನು ಆಯಾ ಕಾಲ ಘಟ್ಟಕ್ಕೆ ತಿದ್ದುಪಡಿ ನಡೆಯುತ್ತಿದೆ. ಆ ಮೂಲಕ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗೆ ಸರಿದೂಗುವಂತೆ ಮಾಡಲಾಗುತ್ತಿದೆ. ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ ಎಂದು ಬೇರೆಯವರಿಗೆ ಧಕ್ಕೆ ತರುವಂತಹದಲ್ಲ. ಯಾರಿಗೂ ಕೆಡಕಾಗದ ರೀತಿಯಲ್ಲಿ ಜೀವಿಸಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಸಾಮಾಜಿಕ ಹೊಣೆಗಾರಿಕೆಯಿದ್ದು, ಸಾಧನೆಯ ಹಾದಿಯಲ್ಲಿ ಸಾಗಬೇಕಿದೆ ಎಂದರು.

ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

Intro:ತುಮಕೂರು: ನೀತಿ, ನಿಯಮ, ಯೋಜನೆಗಳು ಅಂದಿನ ಪ್ರಸ್ತುತತೆಗೆ ಪಕ್ವವಾಗಿರಬೇಕಿದೆ. ಇಲ್ಲವಾದಲ್ಲಿ ಆ ಕಾನೂನು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಸಂವಿಧಾನವನ್ನು ಆಯಾ ಕಾಲ ಘಟ್ಟಕ್ಕೆ ತಿದ್ದುಪಡಿ ಮಾಡುವ ಕಾರ್ಯವು ನಡೆಯುತ್ತಿದೆ. ಆ ಮೂಲಕ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗೆ ಸರಿದೂಗುವಂತೆ ಮಾಡಲಾಗುತ್ತಿದೆ. ಸಂವಿಧಾನದಲ್ಲಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರು ಪಾಲಿಸಬೇಕಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ತಿಳಿಸಿದರು.

Body:ಜಿಲ್ಲಾಡಳಿತ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಒಂದು ದೇಶ ಒಂದು ಸಂವಿಧಾನ ಅಭಿಯಾನ ಕಾರ್ಯಕ್ರಮವನ್ನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ, ಭಾರತದಲ್ಲಿ ಇಗೀನ ಸಂವಿಧಾನ ಇಲ್ಲದೇ ಇದ್ದರೆ ಹೇಗೆ ಕಾಣಿಸುತಿತ್ತು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸದೃಡವಾಗಿ ಮಾಡುವ ಕಾರ್ಯದಲ್ಲಿ ಸಫಲತೆಯನ್ನು ಕಾಣುತಿದ್ದರೆ ಅದಕ್ಕೆ ಸಂವಿಧಾನವೇ ಕಾರಣ. ೭೦ ವರ್ಷದ ಹಿಂದೆ ಬಂದಂತಹ ಸಂವಿಧಾನ ಆಗೀನ ಸಾಮಾಜಿಕ, ಆರ್ಥಿಕ ಹಿನ್ನಲೆಯ ಆಧಾರದ ಮೇಲೆ ರಚನೆ ಆಗಿರುವಂತಹದ್ದು, ಈಗ ಕಳೆದಿರುವ ವರ್ಷಗಳಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ. ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ಕಾಣಬಹುದಾಗಿದ್ದು, ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳುವ ಮೂಲಕ ತಮ್ಮದೇಯಾದ ಕೊಡುಗೆಯನ್ನು ಸಮಾಜಕ್ಕೆ ನೀಡಬೇಕಿದೆ. ನೀತಿ, ನಿಯಮ, ಯೋಜನೆಗಳು ಅಂದಿನ ಪ್ರಸ್ತುತತೆಗೆ ಪಕ್ವವಾಗಿರಬೇಕಿದೆ. ಇಲ್ಲವಾದಲ್ಲಿ ಆ ಕಾನೂನು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಸಂವಿಧಾನವನ್ನು ಆಯಾ ಕಾಲ ಘಟ್ಟಕ್ಕೆ ತಿದ್ದುಪಡಿ ಮಾಡುವ ಕಾರ್ಯವು ನಡೆಯುತ್ತಿದೆ. ಆ ಮೂಲಕ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗೆ ಸರಿದೂಗುವಂತೆ ಮಾಡಲಾಗುತ್ತಿದೆ. ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ ಎಂದು ಬೇರೆಯವರಿಗೆ ದಕ್ಕೆ ತರುವಂತಹದಲ್ಲ, ಯಾರಿಗೂ ಕೆಡಕಾಗದ ರೀತಿಯಲ್ಲಿ ಜೀವಿಸಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಸಾಮಾಜಿಕ ಹೊಣೆಗಾರಿಕೆಯಿದ್ದು, ಜ್ಞಾನದ ಸಮಾಜದಲ್ಲಿ ಸಾಧನೆಯ ಹಾದಿಯಲ್ಲಿ ಸಾಗಬೇಕಿದೆ ಎಂದರು.
ಬೈಟ್: ಪ್ರೊ. ವೈ.ಎಸ್. ಸಿದ್ದೇಗೌಡ, ಕುಲಪತಿ, ತುಮಕೂರು ವಿಶ್ವವಿದ್ಯಾನಿಲಯ.

Conclusion:ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಅವರನ್ನು ಇದೇ ವೇಳೆ ಅವರನ್ನು ಸನ್ಮಾನಿಸಲಾಯಿತು.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.