ETV Bharat / state

ನೂತನ ದೇಗುಲ ಪ್ರವೇಶಿಸಲು 2 ಗುಂಪಿನ ನಡುವೆ ಗಲಾಟೆ...ಪೊಲೀಸರಿಂದ ಲಘು ಲಾಠಿ ಪ್ರಹಾರ - ಲಘು ಲಾಠಿ ಪ್ರಹಾರ

ಮಾರಮ್ಮ ದೇಗುಲಕ್ಕೆ ಮೊದಲು ಪ್ರವೇಶಿಸಬೇಕೆಂದು ಎರಡು ಗುಂಪಿನ ಮುಖಂಡರು ಹಠ ಹಿಡಿದರು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ನೂತನ ದೇಗುಲ
author img

By

Published : May 28, 2019, 11:18 PM IST

ತುಮಕೂರು: ನೂತನವಾಗಿ ನಿರ್ಮಿಸಲಾಗಿರುವ ಮಾರಮ್ಮ ದೇಗುಲಕ್ಕೆ ಮೊದಲು ಪ್ರವೇಶ ಮಾಡಬೇಕು ಎಂಬ ವಿಚಾರದಲ್ಲಿ ಎರಡು ಗುಂಪಿನ ನಡುವೆ ಉಂಟಾದ ಗಲಾಟೆ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಇಂದ್ರಬೆಟ್ಟ ಗ್ರಾಮದಲ್ಲಿ ನಡೆದಿದೆ.

ಗಲಾಟೆ ವೇಳೆ ಎರಡು ಗುಂಪಿನ 100ಕ್ಕೂ ಹೆಚ್ಚು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಎರಡು ಗುಂಪಿನ ನಡುವೆ ಗಲಾಟೆ

ಮಾರಮ್ಮ ದೇಗುಲಕ್ಕೆ ಮೊದಲು ಪ್ರವೇಶಿಸಬೇಕೆಂದು ಎರಡು ಗುಂಪಿನ ಮುಖಂಡರು ಹಠ ಹಿಡಿದಿದ್ದರು. ಇದೇ ವಿಷಯವಾಗಿ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ಮಾರಮ್ಮ ದೇಗುಲದ ಬಳಿ ನಿಯೋಜಿಸಿದ್ದಾರೆ.

Intro:ನೂತನ ದೇಗುಲ ಪ್ರವೇಶಿಸಲು ಎರಡು ಕೋಮಿನ ನಡುವೆ ಪೈಪೋಟಿ….
ಘಷಱಣೆ ಪೊಲೀಸರಿಂದ ಲಘು ಲಾಠಿ ಪ್ರಹಾರ……
ತುಮಕೂರು : ಹೊಸದಾಗಿ ನಿಮಿಱಸಲಾಗಿದ್ದ ಮಾರಮ್ಮ ದೇಗುಲಕ್ಕೆ ಮೊದಲು ಪ್ರವೇಶ ಮಾಡಬೇಕೆಂದು ಹಠ ಹಿಡಿದು ಎರಡು ಕೋಮಿನ ಗುಂಪಿನ ನಡುವೆ ಪರಿಸ್ಥಿತಿ ವಿಕೋಪ ಹೋಗುವುದನ್ನು ತಡೆಯಲು ಪೊಲಿಸರು ಲಘು ಲಾಠಿ ಪ್ರಹಾರ ಮಾಡಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಇಂದ್ರಬೆಟ್ಟ ಗ್ರಾಮದಲ್ಲಿ ನಡೆದಿದೆ.
ಎರಡು ಕೋಮಿನ ಸುಮಾರು 100ಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮೊಕ್ಕಾಂ ಹೂಡಿದ್ದರು. ಮಾರಮ್ಮ ದೇಗುಲಕ್ಕೆ ಮೊದಲು ಪ್ರವೇಶಿಸಬೇಕೆಂದು ಎರಡು ಕೋಮಿನ ಮುಖಂಡರು ಹಠ ಹಿಡಿದರು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸ್ಥಳದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಜನರು ದಿಕ್ಕಾಪಾಲಾಗಿ ಓಡಿದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ಮಾರಮ್ಮ ದೇಗುಲದ ಬಳಿ ನಿಯೋಜಿಸಿದ್ದಾರೆ. ಪರಿಸ್ಥಿತಿ ತಹಬದಿಗೆ ಬಂದಿದೆ.
Body:tumakuruConclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.