ತುಮಕೂರು : ನಗರದ ಸೋಮೇಶ್ವರಪುರಂ ಬಡಾವಣೆಯಲ್ಲಿ ವೀರ ಸಾವರ್ಕರ್ ಹೆಸರಿನ ಉದ್ಯಾನ ಇದ್ದು, ಇದೀಗ ಇಲ್ಲಿ ಯಾವುದೇ ರೀತಿಯ ಘಟನೆಗಳಿಗೆ ಅವಕಾಶ ಸಿಗಬಾರದು ಎಂಬ ಉದ್ದೇಶದಿಂದ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
2016ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಅಂದಿನ ಸಚಿವರಾಗಿದ್ದ ಟಿ ಬಿ ಜಯಚಂದ್ರ ಅವರೇ, ಈ ಉದ್ಯಾನ ಉದ್ಘಾಟನೆ ಮಾಡಿರುವುದು ಪಾರ್ಕ್ನಲ್ಲಿ ಹಾಕಲಾಗಿರುವ ನಾಮಫಲಕದಿಂದ ಸ್ಪಷ್ಟವಾಗುತ್ತಿದೆ.
ಅಲ್ಲದೇ ಅಂದಿನ ಕಾರ್ಯಕ್ರಮದಲ್ಲಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ಸಚಿವರು ಹಾಗೂ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರವೇ ಒಂದು ಸಾವರ್ಕರ್ ಅವರನ್ನು ಹೋರಾಟಗಾರ ಎಂದು ಒಪ್ಪಿಕೊಂಡಿರುವುದು ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ : ಶಿವಮೊಗ್ಗ ನಗರದಲ್ಲಿ ಆಗಸ್ಟ್ 23ರವರೆಗೆ 144 ಸೆಕ್ಷನ್ ವಿಸ್ತರಣೆ