ತುಮಕೂರು : ತುರುವೇಕೆರೆ ತಾಲೂಕಿನ ಜಡೆ ಮಾಯಸಂದ್ರದ ನವರಸ ನಾಯಕ ಜಗ್ಗೇಶ್ ಅವರನ್ನು ಪ್ರಧಾನಿ ಮೋದಿ ಟ್ವಿಟರ್ನಲ್ಲಿ ಫಾಲೋ ಮಾಡುತ್ತಿದ್ದಾರೆ.

ಈ ಬಗ್ಗೆ ಸ್ವತಃ ಜಗ್ಗೇಶ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಇದು ತಮ್ಮ ಸೌಭಾಗ್ಯ ಎಂದು ಪ್ರಸ್ತಾಪಿಸಿದ್ದಾರೆ. ನನ್ನ ಈ ಪುಟ್ಟ ಖಾತೆಯನ್ನು 3 ವರ್ಷದಿಂದ ಈ ಮಹನೀಯ ಹಿಂಬಾಲಿಸುತ್ತಿದ್ದಾರೆ, ಇದೇ ನನ್ನ ಬದುಕಿನ ಆಸ್ಕರ್ ಅವಾರ್ಡ್.. ಅವರು ಹಿಂಬಾಲಿಸುವ 2,354 ಜನರಲ್ಲಿ ಈ ಜಡೆಮಾಯಸಂದ್ರದ ಮನುಷ್ಯನೂ ಒಬ್ಬ, ಧನ್ಯೋಸ್ಮಿ'.. ಎಂದು ಬರೆದುಕೊಂಡಿದ್ದಾರೆ.