ETV Bharat / state

ತಾತನ ಕೊಲೆ ಮಾಡಿ ಜಮೀನಿನಲ್ಲೇ ಶವ ಹೂತ ಮೊಮ್ಮಗನ ಬಂಧನ - ಚೇಳೂರು ಪೊಲೀಸ್ ಠಾಣೆಗೆ ದೂರು

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಅವರ ಮೊಮ್ಮಗನೇ ಕೊಲೆ ಮಾಡಿ ಜಮೀನಿನಲ್ಲಿ ಶವ ಹೂತಿಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.

person-killed-over-property-dispute-in-tumakuru
Etv Bharatತಾತನ ಕೊಲೆ ಮಾಡಿ ಜಮೀನಿನಲ್ಲೇ ಶವ ಹೂತ ಮೊಮ್ಮಗನ ಬಂಧನ
author img

By

Published : Sep 9, 2022, 3:16 PM IST

ತುಮಕೂರು: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮೊಮ್ಮಗನೇ ತನ್ನ ತಾತನನ್ನು ಕೊಲೆ ಮಾಡಿ, ಶವ ಜಮೀನಿನಲ್ಲಿ ಹೂತುಹಾಕಿದ ಘಟನೆ ಜಿಲ್ಲೆಯ ಕಲ್ಲರದ ಗೆರೆ ಬೋವಿ ಕಾಲೋನಿಯಲ್ಲಿ ನಡೆದಿದೆ. ಗೋವಿಂದಪ್ಪ ಎಂಬುವರೇ ಕೊಲೆಯಾದ ವ್ಯಕ್ತಿ.

ಮೃತ ಗೋವಿಂದಪ್ಪನ ಮೊಮ್ಮಗ ಮೋಹನ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಚೇಳೂರು ಪೊಲೀಸರು ಬಂಧಿಸಿದ್ದಾರೆ. 2022ರ ಜನವರಿ 22ರಂದು ಮೋಹನ್ ತನ್ನ ತಾತ ಗೋವಿಂದಪ್ಪನ ತಲೆಗೆ ರಾಡಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಶವ ಜಮೀನಿನಲ್ಲಿ ಹೂತು ಹಾಕಿದ್ದರು.

ಘಟನೆ ನಂತರ ಆರೋಪಿಯು ಯಾರಿಗೂ ಗೊತ್ತಾಗದಂತೆ ಗ್ರಾಮದಲ್ಲೇ ಓಡಾಡಿಕೊಂಡಿದ್ದನು. ಅಲ್ಲದೇ ಗೋವಿಂದಪ್ಪ ಕೂಡ ಈ ಹಿಂದೆ ಆಗಾಗ್ಗೆ ಊರು ಬಿಟ್ಟು ಹೋಗುತ್ತಿದ್ದ. ಇದರಿಂದಾಗಿ ಆತ ಇಲ್ಲದಿರುವ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಸುಮಾರು ಆರು ತಿಂಗಳಾದರೂ ಗೋವಿಂದಪ್ಪ ನಾಪತ್ತೆಯಾಗಿದ್ದ. ತದನಂತರ ಕುಟುಂಬದವರು ಈ ಸಂಬಂಧ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಮೊಮ್ಮಗನೇ ತಾತನ ಕೊಲೆ ಮಾಡಿರುವ ಪ್ರಕರಣ ಬಯಲಾಗಿದೆ.

ಇದನ್ನೂ ಓದಿ: ಮೊಬೈಲ್ ಹೆಚ್ಚು ಬಳಸಬೇಡ ಎಂದು ಅಪ್ಪ ಹೇಳಿದ್ದೇ ತಪ್ಪಾಯ್ತಾ?... ಶವವಾಗಿ ಮಗ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.