ETV Bharat / state

ಜೆಡಿಎಸ್ ಪಂಚರತ್ನ ರಥಯಾತ್ರೆ: ಸ್ಕೂಲ್ ಬ್ಯಾಗ್ ಹಾರ ಹಾಕಿ ಹೆಚ್​ಡಿಕೆಗೆ ವಿಶೇಷ ಸ್ವಾಗತ - ಈಟಿವಿ ಭಾರತ ಕನ್ನಡ

ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಇಂದು ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಸಾಗಿತು.

pancharatna-ratha-yatra
ಜೆಡಿಎಸ್ ಪಂಚರತ್ನ ರಥಯಾತ್ರೆ
author img

By

Published : Dec 28, 2022, 9:53 PM IST

ಜೆಡಿಎಸ್ ಪಂಚರತ್ನ ರಥಯಾತ್ರೆ

ತುಮಕೂರು: ಜಿಲ್ಲೆಯ ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸಾಗುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರುತ್ತಿದ್ದಾರೆ. ಇಂದು ಹೆಚ್‌ಡಿಕೆ ಅವರಿಗೆ ಗ್ರಾಮದ ಜನರು ಸ್ಕೂಲ್​ ಬ್ಯಾಗ್​ಗಳನ್ನು ಬಳಸಿ ತಯಾರಿಸಲಾದ ವಿಶೇಷ ಹಾರ ಹಾಕಿದರು.

ಇದಾದ ಬಳಿಕ ಬೆಂಚೆ ಗ್ರಾಮದತ್ತ ಸಾಗಿದ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮುದಾಯದ ಜನರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಕಂಬಳಿ ಹೊದಿಸಿ, ಕುರಿಮರಿಯನ್ನು ಅವರ ಹೆಗಲ ಮೇಲಿರಿಸಿ ಬರಮಾಡಿಕೊಂಡರು. ಹೆಚ್‌ಡಿಕೆ ಮೇಲೆ ರಚಿಸಿದ್ದ ಹಾಡುಗಳನ್ನು ಗ್ರಾಮಸ್ಥರು ಹಾಡಿದರು. ಜಿಲ್ಲೆಯಲ್ಲಿ ಅರ್ಧಕ್ಕೆ ನಿಂತಿದ್ದ ಪಂಚರತ್ನ ರಥಯಾತ್ರೆ ನಿನ್ನೆಯಿಂದ ಮತ್ತೆ ಆರಂಭಗೊಂಡಿದೆ.

ಇದನ್ನೂ ಓದಿ: ತುಮಕೂರಿನಲ್ಲಿ ಪಂಚರತ್ನ ಯಾತ್ರೆ ಪುನಾರಂಭ: ಹೆಚ್‌ಡಿಕೆಗೆ ಹೂಮಳೆ, ಬೃಹತ್‌ ಸೇಬಿನ ಹಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.