ತುಮಕೂರು/ಪಾವಗಡ : ಪಟ್ಟಣದ ರೊಪ್ಪ ಗ್ರಾಮದಲ್ಲಿ ಕರ್ನಾಟಕ ಯಾದವ ಮಹಾಸೇನೆಯ ಪಾವಗಡ ತಾಲೂಕು ಘಟಕದ ವತಿಯಿಂದ ಚಿತ್ರದುರ್ಗ ಸುಕ್ಷೇತ್ರ ಗೋಲಗಿರಿ ಶ್ರೀಕೃಷ್ಣ ಶ್ರೀ ಯಾದವಾನಂದ ಸ್ವಾಮೀಜಿ ಪಾದಪೂಜೆ ಮತ್ತು ಮಠದ ಶಾಲಾಭಿವೃದ್ಧಿಗಾಗಿ ದೇಣಿಗೆ ಸಂಗ್ರಹಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಯಾದವ ಸಮುದಾಯದ ಬಾಂಧವರು ಗ್ರಾಮವನ್ನು ತಳಿರು-ತೋರಣಗಳಿಂದ ಸಿಂಗರಿಸಿ ಶ್ರೀಕೃಷ್ಣ ಶ್ರೀ ಯಾದವಾನಂದ ಸ್ವಾಮೀಜಿಯವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.
ನಂತರ ಗ್ರಾಮದಲ್ಲಿನ ಯಾದವರ ಮನೆಗಳಲ್ಲಿ ಸ್ವಾಮೀಜಿಗಳ ಪಾದಪೂಜೆ ನೆರವೇರಿತು.