ETV Bharat / state

ಕಲ್ಪತರು ನಾಡಲ್ಲಿ ಮತ್ತೆ ಹರಿದ ನೆತ್ತರು: ಝಳಪಿಸಿದ ಲಾಂಗು-ಮಚ್ಚು!

ಕಲ್ಪತರು ನಾಡಲ್ಲಿ ಮತ್ತೆ ನೆತ್ತರು ಹರಿದಿದೆ. ತುಮಕೂರಿನಲ್ಲಿ ಲಾಂಗು- ಮಚ್ಚುಗಳು ಝಳಪಿಸಿದ್ದು, ಓರ್ವ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ತುಮಕೂರಿನಲ್ಲಿ ಓರ್ವ ವ್ಯಕ್ತಿ ಕೊಲೆ
author img

By

Published : Nov 7, 2019, 11:02 PM IST

ತುಮಕೂರು: ನಗರದ ಹೊರವಲಯದ ನಾಗಣ್ಣನ ಪಾಳ್ಯ ಬಳಿ ಗುಂಪೊಂದು ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದು, ಓರ್ವ ಹತ್ಯೆಗೀಡಾಗಿದ್ದಾನೆ.

ಶಿರಾ ಗೇಟ್ ಬಡಾವಣೆಯ ನಿವಾಸಿ ಮಹಾಂತೇಶ್ ಮೃತ ವ್ಯಕ್ತಿ. ಮಹಾಂತೇಶ್ ಮತ್ತು ಮಂಜುನಾಥ್ ಬೈಕ್​ನಲ್ಲಿ ಅನಿಕೇತನ ಶಾಲೆ ಕಡೆಗೆ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಅಡ್ಡ ಹಾಕಿದ ಚಿನ್ನಿ ಎಂಬಾತ ಹಾಗೂ ಆತನ ಇಬ್ಬರು ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡು ರಕ್ತಸ್ರಾವದಿಂದ ಬಳಲುತ್ತಿದ್ದ ಮಹಾಂತೇಶನನ್ನ ಚಿಕಿತ್ಸೆಗಾಗಿ ಸಿದ್ಧಗಂಗಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಹಾಂತೇಶ ಸಾವಿಗೀಡಾಗಿದ್ದಾನೆ. ಎರಡು ಗುಂಪುಗಳ ಮಧ್ಯೆ ಇಟ್ಟಿಗೆ ಫ್ಯಾಕ್ಟರಿ ವ್ಯವಹಾರದ ವಿಚಾರದಲ್ಲಿ ಗಲಾಟೆ ನಡೆದಿತ್ತು. ಕೊಲೆಗೆ ಇದೇ ಕಾರಣವಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:Body:ಕಲ್ಪತರು ನಾಡಿನಲ್ಲಿ ಮತ್ತೆ ಝಳಪಳಿಸಿದ ಮಚ್ಚು ಲಾಂಗುಗಳು…. ಓವಱನ ಹತ್ಯೆ……
ತುಮಕೂರು
ಕಲ್ಪತರು ನಾಡಿನಲ್ಲಿ ಮತ್ತೊಮ್ಮೆ ಮಂಚು ಲಾಂಗುಗಳು ಝಳಪಳಿಸಿವೆ. 15 ದಿನಗಳಲ್ಲಿ ರೌಡಿಗಳ ಬಡಿದಾಟದಲ್ಲಿ ಒಬ್ಬ ರೌಡಿಶೀಟರ್ ಬಲಿಯಾಗಿದ್ದನು.
ಇಂದು ಸಂಜೆ ತುಮಕೂರು ಹೊರವಲಯದ ನಾಗಣ್ಣನ ಪಾಳ್ಯ ಎಂಬಲ್ಲಿ ದುಷ್ಕಮಿಱಗಳ ಗುಂಪೊಂದು ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದು ಓವಱ ಹತನಾಗಿದ್ದಾನೆ.
ಮಹಾಂತೇಶ್ ಮತ್ತು ಮಂಜುನಾಥ ಎಂಬುವರ ಮೇಲೆ ಹಲ್ಲೆ ನಡೆದಿದ್ದು ಮಹಾಂತೇಶ್ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾನೆ. ಗಂಬೀರವಾಗಿ ಗಾಯಗೊಂಡು ರಕ್ತಸ್ರಾವದಿಂದ ಬಳಲುತ್ತಿದ್ದ ಮಹಾಂತೇಶ್ ನನ್ನು ಚಿಕಿತ್ಸೆಗಾಗಿ ಸಿದ್ದಗಂಗಾ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಸಾವನ್ನಪ್ಪಿದ್ದಾನೆ. ಇನ್ನು ಮಂಜುನಾಥ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ತುಮಕೂರಿನ ಸಿದ್ದಗಂಗಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಬೈಕ್ ನಲ್ಲಿ ಅನಿಕೇತನ ಶಾಲೆ ಕಡೆಗೆ ಹೋಗುತ್ತಿದ್ದ ವೇಳೆ ರಸ್ತೆ ಯಲ್ಲಿ ಅಡ್ಡ ಹಾಕಿದ ಚಿನ್ನಿ ಎಂಬಾತ ಹಾಗೂ ಆತನ ಇಬ್ಬರು ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಶಿರಾ ಗೇಟ್ ಬಡಾವಣೆಯ ವಾಸಿಗಳಾಗಿದ್ದು ಇಟ್ಟಿಗೆ ಫ್ಯಾಕ್ಟರಿ ವ್ಯವಹಾರದ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.