ತುಮಕೂರು: ಈಗಾಗಲೇ ಸಿರಾ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆ. ಅಲ್ಲದೆ ಅವರ 13 ವರ್ಷದ ಬಾಲಕನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಿಲ್ಲಾಡಳಿತ ಕೂಡ ಮುಂಜಾಗ್ರತಾ ಕ್ರಮವಾಗಿ ಸಿರಾ ಪಟ್ಟಣದಲ್ಲಿ ಅಲರ್ಟ್ ಘೋಷಣೆ ಮಾಡಿದೆ. ಹೀಗಿದ್ದರೂ ಸಿರಾ ಪಟ್ಟಣದಲ್ಲಿ ಜನರು ಯಾವುದಕ್ಕೂ ಕ್ಯಾರೇ ಎನ್ನದೆ ಸಾಮಾಜಿಕ ಅಂತರವನ್ನೂ ಪಾಲನೆ ಮಾಡುತ್ತಿಲ್ಲ.
ಇದಕ್ಕೆ ಸಾಕ್ಷಿಯೆಂಬಂತೆ ಸಿರಾ ಪಟ್ಟಣದಲ್ಲಿ ಕೆನರಾ ಬ್ಯಾಂಕ್ ಮುಂಭಾಗ ಜನರು ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಲಾಕ್ಡೌನ್ಗೆ ಅರ್ಥವಿಲ್ಲದಂತೆ ಜನರು ಬ್ಯಾಂಕುಗಳ ಎದುರು ಗುಂಪು ಗುಂಪಾಗಿ ನಿಂತಿರುವುದು ನೋಡುಗರಲ್ಲಿ ಆತಂಕ ಸೃಷ್ಟಿಸುತ್ತಿದೆ.