ತುಮಕೂರು: ಪ್ರಜಾಪ್ರಭುತ್ವ ಅಂದ್ರೆ ಜನರಿಂದ ಜನರಿಗಾಗಿ. ಆದರೆ ಈಗ ಜನರಿಂದ ನಾಯಕರಿಗೋಸ್ಕರ ಎಂಬಂತಾಗಿದೆ. ಸರ್ಕಾರ ಜನರ ಪರವಾಗಿ ಕೆಲಸ ಮಾಡಬೇಕು. ವ್ಯವಸ್ಥೆ ಇರೋದು ಜನರಿಗೋಸ್ಕರ ರಾಜಕಾರಣಿಗಳಿಗಾಗಿ ಅಲ್ಲ. ಬೇಲಿನೇ ಎದ್ದು ಹೊಲ ಮೇಯ್ದರೇ ಜನರು ಏನು ಮಾಡಬೇಕು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪ್ರಶ್ನಿಸಿದ್ದಾರೆ.
ಇನ್ನು, ಯಾವುದೇ ಸಮುದಾಯದವರನ್ನು ಟಾರ್ಗೆಟ್ ಮಾಡಿಲ್ಲ. ಒಕ್ಕಲಿಗರ ಸಮುದಾಯ ಯಾವತ್ತೂ ನಾಡಿನ ನಾಯಕರಾದಂಥವರು. ದೇಶಕ್ಕೆ ಒಬ್ಬ ರಾಜನಾದ್ರೆ, ಊರಿಗೊಬ್ಬ ಗೌಡ. ಆ ದಾರಿಯಲ್ಲಿ ನಿಂತಿರುವವರು. ಎಲ್ಲರಿಗೂ ನಾಯಕತ್ವ ಕೊಡುವವರು ಒಕ್ಕಲಿಗರು ಎಂದು ಡಿಸಿಎಂ ಹೇಳಿದ್ರು.
ಈ ಸಂದರ್ಭದಲ್ಲಿ ತುರುವೆಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಹಾಜರಿದ್ದರು.