ETV Bharat / state

ಪ್ರಚೋದನಾತ್ಮಕ ಕಾಮೆಂಟ್​: ಆರೋಪಿ ಕುರಿತು ಫೇಸ್​​ಬುಕ್​ಗೆ ಪತ್ರ ಬರೆದ ತುಮಕೂರು ಎಸ್ಪಿ - ಪ್ರಚೋದನಾತ್ಮಕ ಹೇಳಿಕೆ: ಫೇಸ್​ ಬುಕ್​ಗೆ ಪತ್ರ ಬರೆದ ಜಿಲ್ಲಾ ಎಸ್ಪಿ

ಫೇಸ್​ಬುಕ್​ನಲ್ಲಿ ಧರ್ಮ ಗುರವೊಬ್ಬರ ಬಗ್ಗೆ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿರುವ ಮಧುಗಿರಿ ಮೋದಿ ಎಂಬಾತನ ಫೇಸ್ ಅಕೌಂಟ್ ಕುರಿತು ಕ್ರಮ ತೆಗೆದುಕೊಳ್ಳಲು ಫೇಸ್​ ಬುಕ್​ಗೆ ಜಿಲ್ಲಾ ಎಸ್ಪಿ ವಂಶಿ ಕೃಷ್ಣ ಪತ್ರ ಬರೆದಿದ್ದಾರೆ.

Vamshi Krishna
ವಂಶಿ ಕೃಷ್ಣ
author img

By

Published : Feb 17, 2020, 8:47 PM IST

ತುಮಕೂರು: ಧರ್ಮದ ಗುರುವೊಬ್ಬರ ಬಗ್ಗೆ ಪ್ರಚೋದನಾತ್ಮಕವಾಗಿ ಫೇಸ್​ಬುಕ್​ನಲ್ಲಿ ಹೇಳಿಕೆಗಳನ್ನು ನೀಡುತ್ತಿರುವ ಅತುಲ್ ಸಬರವಾಲ್ ಅಲಿಯಾಸ್ ಮಧುಗಿರಿ ಮೋದಿ ಎಂಬಾತನ ಫೇಸ್ ಅಕೌಂಟ್ ಕುರಿತು ಕ್ರಮ ತೆಗೆದುಕೊಳ್ಳಲು ಫೇಸ್​ಬುಕ್​ಗೆ ಪತ್ರ ಬರೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಎಸ್ಪಿ ವಂಶಿ ಕೃಷ್ಣ

ಈ ಬಗ್ಗೆ ಮಾತನಾಡಿದ ಅವರು, ಫೇಸ್​ಬುಕ್​ ಮೂಲಕ ಹೇಳಿಕೆಗಳನ್ನು ಅಪ್​ಲೋಡ್ ಮಾಡುತ್ತಿರುವುದರಿಂದ ಶಾಂತಿ ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆಯಿದೆ ಎಂದು ಪತ್ರ ಬರೆಯಲಾಗಿದೆ. ಮೂರರಿಂದ ನಾಲ್ಕು ದಿನಗಳ ನಂತರ ಫೇಸ್​ಬುಕ್ ನಿಂದ ಉತ್ತರ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಧರ್ಮಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋವನ್ನು ಫೇಸ್​ಬುಕ್ ನಲ್ಲಿ ಅಪ್​ಲೋಡ್ ಮಾಡಿರುವ ಕುರಿತು ವಿಡಿಯೋ ವೈರಲ್ ಆಗಿರುವುದು ಕಂಡುಬಂದ ತಕ್ಷಣ ಅವರನ್ನು ಪತ್ತೆ ಹಚ್ಚಲು ತಂಡ ರಚಿಸಲಾಗಿದೆ ಎಂದರು.

ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ 153ಎ, 295ಎ,67 ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ. ಅಲ್ಲದೇ ಈ ಬಗ್ಗೆ ಶಿರಾ, ತುಮಕೂರು ನಗರ, ಮಧುಗಿರಿಯಲ್ಲಿಯೂ ಮೂರು ಕಡೆ ಧರ್ಮ ಗುರುಗಳು ದೂರು ನೀಡಿದ್ದಾರೆ ಎಂದರು.

ಒಂದು ಧರ್ಮದ ಗುರುಗಳು ಮತ್ತು ಮುಖಂಡರು ಇದರಿಂದ ಪ್ರಚೋದನೆಗೆ ಒಳಗಾಗಬಾರದು. ವೈಯಕ್ತಿಯವಾಗಿ ನಿಂದಿಸಿರುವುದರಿಂದ ನಾವು ಶಿಸ್ತು ಕ್ರಮ ತೆಗೆದುಕೊಳ್ಳತ್ತೇವೆ. ಶಾಂತಿ ಕಾಪಾಡುವಂತೆ ಎಸ್​ಪಿ ಮನವಿ ಮಾಡಿದ್ರು.

ಪ್ರಚೋದನಾತ್ಮಕವಾಗಿ ಹೇಳಿಕೆಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಜಯನಗರ ಪೊಲೀಸ್ ಠಾಣೆಯಲ್ಲಿಯೂ 153 ಪ್ರಕಾರ ಪ್ರಕರಣವೊಂದು ದಾಖಲಾಗಿದೆ. ರೌಡಿಶೀಟರ್ ಆಗಿಯೂ ಈತನನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.