ತುಮಕೂರು: ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್ಗಳಾದ 257 ಆಶಾ ಕಾರ್ಯಕರ್ತೆಯರಿಗೆ ಶಾಸಕ ಡಿ. ಸಿ. ಗೌರಿಶಂಕರ್ ಹೂಮಳೆ ಸುರಿಸಿ ಅಭಿನಂದನೆ ಸಲ್ಲಿಸಿದರು.
ಗೂಳೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ಫುಡ್ ಕಿಟ್, ಅರಿಶಿನ-ಕುಂಕುಮ, ಬಳೆ, ಸೀರೆ ನೀಡಿದರು.
![ಆಶಾ ಕಾರ್ಯಕರ್ತೆಯರಿಗೆ ಹೂ ಮಳೆ ಸುರಿಸಿ ಅಭಿನಂದನೆ](https://etvbharatimages.akamaized.net/etvbharat/prod-images/kn-tmk-05-mlagowrishankar-vis-7202233_11052020160221_1105f_01788_353.jpg)
ಇದೇ ವೇಳೆ ಮಾತನಾಡಿದ ಡಿ. ಸಿ. ಗೌರಿಶಂಕರ್, ಸಂಸ್ಕೃತಿ ಮತ್ತು ಭಾವನೆಗಳಿಗೆ ಗೌರವ ಕೊಡಬೇಕು ಎಂಬ ಉದ್ದೇಶದಿಂದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸುತ್ತಿದ್ದೇನೆ. ಅಲ್ಲದೆ ನಾವು ಜನಪ್ರತಿನಿಧಿಗಳು ಮತ್ತು ನೀವು ಆಶಾ ಕಾರ್ಯಕರ್ತೆಯರು ಎಂಬ ಭೇದಭಾವವಿಲ್ಲದೆ ನಿಮ್ಮ ಕೆಲಸಕ್ಕೆ ಗೌರವಿಸುತ್ತಿದ್ದೇನೆ ಎಂದರು.
![ಆಶಾ ಕಾರ್ಯಕರ್ತೆಯರಿಗೆ ಹೂ ಮಳೆ ಸುರಿಸಿ ಅಭಿನಂದನೆ](https://etvbharatimages.akamaized.net/etvbharat/prod-images/kn-tmk-05-mlagowrishankar-vis-7202233_11052020160221_1105f_01788_339.jpg)
ಲಾಕ್ಡೌನ್ ಮುಗಿಯುವವರೆಗೂ ಗ್ರಾಮೀಣ ಪ್ರದೇಶದಲ್ಲಿ ಯಾರೇ ಸಂಕಷ್ಟದಲ್ಲಿದ್ದರೂ, ಅವರ ನೆರವಿಗೆ ಬರಲು ನಾನು ಸಿದ್ಧನಿದ್ದೇನೆ. ಅಲ್ಲದೇ ಜನರ ಸಮಸ್ಯೆಗಳು ತಮ್ಮ ಅರಿವಿಗೆ ಬಂದರೆ ನನ್ನ ಗಮನಕ್ಕೆ ದಯವಿಟ್ಟು ತನ್ನಿ ಎಂದು ಆಶಾ ಕಾರ್ಯಕರ್ತೆಯರಿಗೆ ಮನವಿ ಮಾಡಿದರು.