ತುಮಕೂರು: ಗುಬ್ಬಿ ಪಟ್ಟಣದಲ್ಲಿ ನಡೆದ ಡಿಎಸ್ಎಸ್ ಮುಖಂಡ ನರಸಿಂಹಮೂರ್ತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
"ನರಸಿಂಹಮೂರ್ತಿ ದಲಿತ ಮುಖಂಡರು, ಪ.ಪಂ ಸದಸ್ಯರಾಗಿದ್ದವರು. ಅಂಥವರ ಕೊಲೆ ದಿಗ್ಭ್ರಮೆ ಮೂಡಿಸಿದೆ. ಈ ಕೊಲೆಗೆ ರಾಜಕೀಯ ಬಣ್ಣ ಕೊಡೋದು ಬೇಡ. ಹಾಡಹಗಲೇ ಕೊಲೆ ಆಗಿದೆ. ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಆದರೂ ಪೊಲೀಸರು ಶಂಕಿತರನ್ನು ಬಂಧಿಸಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಗೃಹ ಸಚಿವರು ಈಗಾಗಲೇ ಭೇಟಿ ನೀಡಿದ್ದಾರೆ" ಎಂದು ಸಚಿವರು ಹೇಳಿದರು.
"ಇಡೀ ಜಿಲ್ಲೆಗೆ ಇದು ಎಚ್ಚರಿಕೆಯ ಗಂಟೆ ಆಗೋ ರೀತಿ ಕ್ರಮ ಕೈಗೊಳ್ಳುತ್ತೇವೆ. ಇಂತಹ ಒಂದೋ ಎರಡೋ ಘಟನೆ ನಡೆದಾಗ ಕಾನೂನು ವ್ಯವಸ್ಥೆ ಕೆಟ್ಟಿದೆ ಅನ್ನೋದಕ್ಕೆ ನೈತಿಕತೆ ಇಲ್ಲ. ಪೆದ್ದನಹಳ್ಳಿ ಘಟನೆ ಮತ್ತು ನಿನ್ನೆ ನಡೆದ ಘಟನೆ ಪ್ರತ್ಯೇಕ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ" ಎಂದರು.
ಇದನ್ನೂ ಓದಿ: ಕಾಂಗ್ರೆಸ್ನವರದು ಹೋರಾಟವಲ್ಲ, ರಾಜಕೀಯ ದೊಂಬರಾಟ: ಸಚಿವ ಹಾಲಪ್ಪ ಆಚಾರ್