ತುಮಕೂರು: ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಅಲ್ಲ, ಕಾಂಗ್ರೆಸ್‌ನವರ ಜೊತೆ ಹೊಂದಾಣಿಕೆ ಆಗದೆ ಬೇಸತ್ತು ಶಿವಸೇನೆ ಹಾಗೂ ಎನ್‌ಸಿಪಿಯಿಂದ ಅವರು ಬಿಟ್ಟು ಬಂದಿದ್ದಾರೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸ್ಟೇರಿಂಗ್, ಬ್ರೇಕ್, ಎಕ್ಸಲೇಟರ್ ಇದು ಬೇರೆ ಬೇರೆ ವ್ಯಕ್ತಿಗಳ ಜೊತೆ ಇದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರದಲ್ಲಿ ಅಪಘಾತ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ದಿನದಲ್ಲಿ ಬಿಜೆಪಿ ಸರ್ಕಾರ ಮಹಾರಾಷ್ಟ್ರದಲ್ಲಿ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.
ಇದನ್ನೂ ಓದಿ: ಅಗ್ನಿಪಥ ಯೋಜನೆ ಖಂಡಿಸಿ ಕಾಂಗ್ರೆಸ್ ಸತ್ಯಾಗ್ರಹ: ವಿದ್ಯಾರ್ಥಿಗಳ ಬೆಂಬಲ ಕೋರಿದ ಡಿಕೆಶಿ