ETV Bharat / state

ಆ ಆಡಿಯೋ ನನ್ನದೇ, ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡೋದು ಅಪರಾಧ: ಸಚಿವ ಮಾಧುಸ್ವಾಮಿ - ಈಟಿವಿ ಭಾರತ ಕನ್ನಡ

ಯಾರೂ ನನ್ನ ವಿರುದ್ಧ ಷಡ್ಯಂತ್ರ ಮಾಡಿಲ್ಲ. ಯಾರನ್ನೂ ನಾನು ದೂಷಣೆ ಮಾಡೋದಿಲ್ಲ. ಈ ಬಗ್ಗೆ ಈಗಾಗಲೇ ಸಿಎಂಗೆ ಸ್ಪಷ್ಟನೆ ನೀಡಿದ್ದೇನೆ. ರಾಜೀನಾಮೆ ಕೊಡುವ ಪ್ರಮಯವಿಲ್ಲ. ಒಂದು ವೇಳೆ ಸಿಎಂ ಕೇಳಿದರೆ ರಾಜೀನಾಮೆ ನೀಡುವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

minister-jc-madhuswamy-reaction-on-his-audio-clip-of-unhappy-with-government
ಆ ಆಡಿಯೋ ನನ್ನದೇ.. ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡೋದು ಅಪರಾಧ: ಸಚಿವ ಮಾಧುಸ್ವಾಮಿ
author img

By

Published : Aug 16, 2022, 5:54 PM IST

Updated : Aug 16, 2022, 6:20 PM IST

ತುಮಕೂರು: ಇತ್ತೀಚೆಗೆ ವೈರಲ್​ ಆಗಿರುವ ಆಡಿಯೋದಲ್ಲಿರುವ ಧ್ವನಿ ನನ್ನದೇ. ಆ ಆಡಿಯೋ ತುಂಬಾ ಹಳೆಯದು. ಯಾವಾಗ ಮಾತನಾಡಿದ್ದೀನಿ ಅನ್ನೋದು ನನಗೇ ನೆನಪಿಲ್ಲ. ನಮ್ಮ ಸರ್ಕಾರ ಮತ್ತು ಮಂತ್ರಿಗಳ ಮೇಲೆ ಗೌರವವಿದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು.

ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಜೆ ಸಿ ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಾಮಿಕ ವ್ಯಕ್ತಿ ನನ್ನ ಪ್ರವೋಕ್ ಮಾಡಿದ್ದ. ಹೀಗಾಗಿ ನಾನು ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳಿದ್ದೆ. ಆದರೆ, ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡೋದು ಕೂಡ ಅಪರಾಧ. ಹೀಗಾಗಿ‌ ಆ ವಿಡಿಯೋ ಪ್ರಸಾರ ಮಾಡಿದವರ ಮೇಲೂ ಕೇಸ್ ಹಾಕುತ್ತೇನೆ. ಅಪರಿಚಿತ ವ್ಯಕ್ತಿಯ ದಾಖಲೆಯನ್ನು ಮಾಧ್ಯಮದವರು ನೀಡಲಿ ಎಂದು ಹೇಳಿದರು.

ಆ ಆಡಿಯೋ ನನ್ನದೇ.. ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡೋದು ಅಪರಾಧ: ಸಚಿವ ಮಾಧುಸ್ವಾಮಿ

ಇದನ್ನೂ ಓದಿ: ಸಚಿವ ಜೆ.ಸಿ. ಮಾಧುಸ್ವಾಮಿ ಬೇರೆ ಅರ್ಥದಲ್ಲಿ ಹೇಳಿದ್ದಾರೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಯಾರೂ ನನ್ನ ವಿರುದ್ದ ಷಡ್ಯಂತ್ರ ಮಾಡಿಲ್ಲ. ಯಾರನ್ನೂ ನಾನು ದೂಷಣೆ ಮಾಡಲಾರೆ. ಈ ಬಗ್ಗೆ ಈಗಾಗಲೇ ಸಿಎಂಗೆ ಸ್ಪಷ್ಟನೆ ನೀಡಿದ್ದೇನೆ. ರಾಜೀನಾಮೆ ಕೊಡುವ ಪ್ರಮಯವಿಲ್ಲ. ಒಂದೇ ವೇಳೆ ಸಿಎಂ ರಾಜೀನಾಮೆ ಕೇಳಿದರೆ ಕೊಡುತ್ತೇನೆ. ಸಚಿವ ಸೋಮಶೇಕರ್ ಕುರಿತು ನಾನು ಗೌರವಯುತವಾಗಿ ಮಾತನಾಡಿದ್ದೇನೆ. ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸರ್ಕಾರದ ಬಗ್ಗೆ ಎರಡು ಮಾತಿಲ್ಲ. ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತಿದ್ದಾರೆ. ಅವರ ಬದಲಾವಣೆ ಇಲ್ಲ ಮತ್ತು ಸಚಿವ ಸಂಪುಟನೂ ಪುನಾರಚನೆ ಆಗೋದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್ಮೆಂಟ್ ಮಾಡುತ್ತಿದ್ದೇವೆ.. ಹೀಗಂದ್ರಾ ಸಚಿವ ಮಾಧುಸ್ವಾಮಿ?

Last Updated : Aug 16, 2022, 6:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.