ETV Bharat / state

ಎಲ್ಲಾ ಸಮುದಾಯದ ಅಭಿವೃದ್ಧಿಗೆ ದುಡಿದ ಸಚಿವ ಡಾ ಸುಧಾಕರ್​: ಜಿ ಪರಮೇಶ್ವರ್

ಡಾ ಸುಧಾಕರ್​ ಅವರನ್ನು ಹೊಗಳಿದ ಜಿ ಪರಮೇಶ್ವರ್​- ಕಠಿಣ ಕ್ರಮಗಳನ್ನು ಕೈಗೊಂಡು ಲಕ್ಷಾಂತರ ಪ್ರಾಣ ಉಳಿಸಿದವರು ಸುಧಾಕರ್​- ನನ್ನ ಹಾಗೂ ಸುಧಾಕರ್​ ಸಂಬಂಧ ತಂದೆ ಮಗನ ಸಂಬಂಧ ಎಂದ ಮಾಜಿ ಉಪಮುಖ್ಯಮಂತ್ರಿ

Former Deputy Chief Minister G Parameshwar
ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಮಾತನಾಡಿದರು.
author img

By

Published : Dec 24, 2022, 4:26 PM IST

Updated : Dec 24, 2022, 4:48 PM IST

ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್

ತುಮಕೂರು: ನಾವು ವಿರೋಧ ಪಕ್ಷದಲ್ಲಿದ್ದು, ಬಹಳ ಸೂಕ್ಷ್ಮ ದೃಷ್ಟಿಯಿಂದ ಆಡಳಿತ ಪಕ್ಷದ ಮಂತ್ರಿಗಳನ್ನು ಗಮನಿಸುತ್ತಿರುತ್ತೇವೆ. ಠೀಕೆ ಟಿಪ್ಪಣಿಗಳನ್ನು ಮಾಡುತ್ತೇವೆ. ಆದರೆ ಇಡೀ ರಾಜ್ಯದ ಎಲ್ಲಾ ಸಮುದಾಯದ ಅಭಿವೃದ್ಧಿಗೆ ದುಡಿದ ಸಚಿವರೆಂದರೆ ಅದು ಡಾ ಸುಧಾಕರ್​ ಅವರು ಮಾತ್ರ. ಇದು ಹೊಗಳಿಕೆ ಮಾತಲ್ಲ. ಯಾಕೆಂದರೆ ಕೋವಿಡ್​ ಬಂದ ಸಂದರ್ಭದಲ್ಲಿ ಇವರಿಗೆ ಬಂದ ಕಷ್ಟ ಮುಖ್ಯಮಂತ್ರಿಗಳಿಗೂ ಬಂದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಹೇಳಿದರು.

ಕೊರಟಗೆರೆ ತಾಲ್ಲೂಕಿನ ದೊಡ್ದ ಸಾಗ್ಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಬಂದ ಸಂದರ್ಭದಲ್ಲಿ ನಾವೆಲ್ಲಾ ಅವರನ್ನು ಬೈದಿದ್ದೇವೆ. ಕುರಿಗಳಿಗೆ ಹಾಕಿದಂತೆ ಮಾಸ್ಕ್ ಹಾಕಬೇಕು ಎಂದು ಸಿಟ್ಟಾಗಿದ್ದೇವೆ. ಯಾರ ಬೈಗುಳದ ಮಾತಿಗೂ ಹೆದರದೆ ಕಠಿಣ ಕ್ರಮ ತೆಗೆದುಕೊಂಡು ಸಚಿವರು ಲಕ್ಷಾಂತರ ಜನರ ಪ್ರಾಣ ಉಳಿಸಿದ್ದಾರೆ. ಅವರ ಕ್ರಿಯಾಶೀಲತೆ ನಿಜವಾಗಿಯೂ ಮೆಚ್ಚುವಂತಹದ್ದು. ನಾವು ವಿರೋಧ ಪಕ್ಷ ಆದ ಮಾತ್ರಕ್ಕೆ ಬರೀ ಬೈಬೇಕು ಅಂತಲ್ಲ. ಒಳ್ಳೆ ಕೆಲಸ‌ ಮಾಡಿದಾಗ ಒಳ್ಳೆ ಕೆಲಸ‌ ಮಾಡಿದ್ದಾರೆ ಅಂತಲೂ ಹೇಳ್ಬೇಕು ಎಂದರು.

ಈಗ ಮತ್ತೆ ಕೊರೊನಾ ಶುರುವಾಗಿದೆ. ಕೊರೊನಾ ಪಕ್ಷ ನೋಡಿ ಬರಲ್ಲ, ಕಾಂಗ್ರೆಸ್​ಗೆ ಜಾಸ್ತಿ ಬರುತ್ತೆ, ಬಿಜೆಪಿಗೆ ಕಡಿಮೆ ಬರುತ್ತೆ ಅಂತ ಇಲ್ಲ. ನಡುವೆ ಜನತಾದಳವೂ ಇದೆ. ಅದಕ್ಕೂ ಬರಬಹುದು. ಹೀಗಾಗಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಅಧಿವೇಶನ‌, ಹಲವು ಕೆಲಸ ಕಾರ್ಯಗಳಿದ್ದರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೆಲಸ ನಿಲ್ಲೋದು ಬೇಡ ಎಂದು ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ನನ್ನ ಹಾಗೂ ಸುಧಾಕರ್ ಸಂಬಂಧ ತಂದೆ‌ ಮಗನ ಸಂಬಂಧ. ಯಾವ ಪಕ್ಷದಲ್ಲಿ ಇದ್ದರೂ ಅಷ್ಟೇ. ನನ್ನ ಬಗ್ಗೆ ಅವರು ಆಡಿದ ಮಾತಿಗೆ ನಾನು ಆಭಾರಿ. ಎಂದು ಹೇಳಿದರು.

ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಮಾಸ್ಕ್ ಕಡ್ಡಾಯ ಶೀಘ್ರ ನಿರ್ಧಾರ: ಸಚಿವ ಡಾ ಕೆ ಸುಧಾಕರ್

Last Updated : Dec 24, 2022, 4:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.