ತುಮಕೂರು: ದೇಶದಲ್ಲಿ 'ಅಕ್ಬರ್ ದಿ ಗ್ರೇಟ್' ಎಂದು ಹೇಳುತ್ತೇವೆ. ಆದರೆ, ಆತನ ಇನ್ನೊಂದು ಮುಖವನ್ನು ಕೂಡ ನಾವು ಮಕ್ಕಳಿಗೆ ತಿಳಿಸಬೇಕಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬ್ರಿಟಿಷರು ಈ ದೇಶವನ್ನು ಆಳಿದರೂ ಅವರಿಗೆ ಬೇಕಾದ ಹಾಗೆ ಶಿಕ್ಷಣವನ್ನು ಅಳವಡಿಸಿಕೊಂಡರು. ಅದನ್ನು ತಪ್ಪು ಎಂದು ನಾವು ಹೇಳುವುದಿಲ್ಲ ಎಂದರು.
ನಾವು ನಿಜ ಹೇಳಲು ಹೊರಟರೆ ಅದನ್ನು ಕೇಸರೀಕರಣ ಮಾಡಲು ಹೋಗುತ್ತಿದ್ದಾರೆ ಎಂದು ಹೇಳುತ್ತಾರೆ. ಅದಕ್ಕೆ ನಾವೇನು ಮಾಡಲು ಆಗುತ್ತೆ?. ನಾವು ನಿಜ ಹೇಳಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ, ಸರ್ಕಾರ ವಿವಿಧ ಸಮುದಾಯದ ಪೀಠಗಳಿಗೆ ಮರ್ಯಾದೆ ಕೊಡುವುದನ್ನು ಮುಂದುವರೆಸಿದೆ. ಅದನ್ನು ಪೀಠಗಳು ಉಳಿಸಿಕೊಂಡು ಹೋಗಬೇಕು ಎಂದು ಎಚ್ಚರಿಕೆ ನೀಡಿದರು.
ಪಿಎಸ್ಐ ನೇಮಕಾತಿಗೆ ಸಂಬಂಧಪಟ್ಟಂತೆ ಆರೋಪಿ ಸಂತೋಷ್ ಬಿಜೆಪಿ ಕಾರ್ಯಕರ್ತನಾಗಿದ್ದಾನೆ. ಆದರೆ, ಆತನಿಗೆ ಪಕ್ಷದ ವತಿಯಿಂದ ಯಾವುದೇ ರೀತಿಯ ಜವಾಬ್ದಾರಿ ನೀಡಿಲ್ಲ. ಕೇವಲ ಒಂದು ಮಿಸ್ ಕಾಲ್ ಹೊಡೆದರೆ ಬಿಜೆಪಿ ಸದಸ್ಯರಾಗಿ ಗುರುತಿಸಿಕೊಳ್ಳಬಹುದು ಅಷ್ಟೇ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ ತನಿಖೆ ಪೂರ್ಣಗೊಂಡ ನಂತರ ಸತ್ಯಾಸತ್ಯತೆ ಹೊರ ಬೀಳಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಒಬ್ರು ಬೆಂಕಿ ಹಚ್ತಾರೆ, ಮತ್ತೊಬ್ರು ಪೆಟ್ರೋಲ್ ಸುರೀತಾರೆ: ಹೆಚ್‌ಡಿಕೆ