ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಆದೇಶದ ಮೇರೆಗೆ ಪಾವಗಡ ಪಟ್ಟಣದಲ್ಲಿ ಮೇ 3ರ ತನಕ ಮಧ್ಯಾಹ್ನದ ಊಟ ನೀಡುವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಗಿದೆ ಎಂದು ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದ್ದಾರೆ.
ಊಟ ಹಂಚಿ, ಬಳಿಕ ಮಾತನಾಡಿದ ಅವರು,ಪಾವಗಡ ಪಟ್ಟಣದ ಹಾಲಿ ಮಾಜಿ ಪುರಸಭಾ ಸದಸ್ಯರು ಮತ್ತು ಮುಖಂಡರ ಸಹಕಾರದಿಂದ ಊಟ ಕೊಡುವ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದು,ಯಾವುದೇ ಸಮಸ್ಯೆ ಎದುರಾಗದಂತೆ ಈ ಮಹತ್ವದ ಕಾರ್ಯ ಮೇ 3 ರ ತನಕ ಸಾಗಬೇಕೆಂದರು.
ಜೆಡಿಎಸ್ ಪಕ್ಷದ ಜಿಲ್ಲಾ ಅದ್ಯಕ್ಷರಾದ ಆರ್.ಸಿ.ಅಂಜಿನಪ್ಪ ಮಾತನಾಡಿ, ಕೊರೊನಾ ಹರಡಿದ ಪರಿಣಾಮ ಬಡವರು ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭಗಳಲ್ಲಿ ಜನತೆಯ ಪರವಾಗಿ ನಿಲ್ಲಿ ಎಂದು ಹೆಚ್ಡಿಡಿ ಮತ್ತು ಹೆಚ್ಡಿಕೆ ನೀಡಿದ ನಿರ್ದೇಶನದಂತೆ ಪಾವಗಡ ಸೇರಿದಂತೆ ಜಿಲ್ಲೆಯಾದ್ಯಂತ ಊಟ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.