ತುಮಕೂರು: ಬಹುನಿರೀಕ್ಷಿತ ಬೆಂಗಳೂರು-ತುಮಕೂರು ನಡುವಿನ ಮೆಮು ರೈಲು ಸಂಚಾರಕ್ಕೆ ಏಪ್ರಿಲ್ 8ರಂದು ಚಾಲನೆ ದೊರೆಯಲಿದೆ. ಈಗಾಗಲೇ ಬೆಂಗಳೂರು-ತುಮಕೂರು ನಡುವಿನ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕೆಲಸ ಪೂರ್ಣಗೊಂಡಿದೆ. ಪ್ರಸ್ತುತ ಬೆಂಗಳೂರು-ತುಮಕೂರು ನಡುವೆ 8 ಬೋಗಿಗಳ ಡೆಮೋ ರೈಲು ಸಂಚಾರ ನಡೆಸುತ್ತಿದ್ದು, ಇನ್ಮುಂದೆ 16 ಬೋಗಿಗಳ ರೈಲು ಸಂಚರಿಸಲಿದೆ.
ನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ತುಮಕೂರು-ಬೆಂಗಳೂರು ನಡುವೆ ಪ್ರಯಾಣ ಮಾಡುತ್ತಾರೆ. ಇದರಿಂದಾಗಿ ಡೆಮು ರೈಲಿನಲ್ಲಿ ಪ್ರಯಾಣ ಮಾಡುವುದು ಸಾಕಷ್ಟು ಪ್ರಯಾಸದಾಯಕವಾಗಿತ್ತು. ಹೀಗಾಗಿ, ಈ ರೈಲಿನಲ್ಲಿ 16 ಬೋಗಿಗಳನ್ನು ಸೇರಿಸಲಾಗುತ್ತಿದೆ. ನಿತ್ಯ ಬೆಳಗ್ಗೆ 9:30ಕ್ಕೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಡುವ ರೈಲು ಬೆ. 11ಕ್ಕೆ ತುಮಕೂರಿನ ರೈಲ್ವೆ ನಿಲ್ದಾಣವನ್ನು ತಲುಪಲಿದೆ.
11.15ಕ್ಕೆ ಪುನಃ ತುಮಕೂರು ರೈಲ್ವೆ ನಿಲ್ದಾಣದಿಂದ ಹೊರಟು 1.50ಕ್ಕೆ ಬೆಂಗಳೂರಿನ ಕೆಂಪೇಗೌಡ ರೈಲ್ವೆ ನಿಲ್ದಾಣವನ್ನು ತಲುಪಲಿದೆ. ಅದೇ ರೀತಿ ದಿನಕ್ಕೆ 2 ಬಾರಿ ಸಂಚಾರ ನಡೆಸಲಿದೆ ಎಂದು ತಿಳಿದುಬಂದಿದೆ.
ಓದಿ: 'ಮುಸಲ್ಮಾನರು ಯಾರೂ ಮಾವು ಬೆಳೆಯೋದಿಲ್ಲ, ಹಿಂದೂ ರೈತರು ಬೆಳೆದ ಮಾವನ್ನು ಅವ್ರು ಖರೀದಿಸೋದು'