ETV Bharat / state

ಸೊಗಡು ಶಿವಣ್ಣ ವಿರುದ್ಧ ಕುರುಬ ಸಂಘಟನೆಗಳ ಒಕ್ಕೂಟದ ಆಕ್ರೋಶ - cm siddharamayya

ಕುರುಬ ಸಂಘಟನೆಗಳ ಒಕ್ಕೂಟ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಕೊಂಡವಾಡಿ ತಿಮ್ಮಯ್ಯ ಹಾಗೂ ಸಿ.ಡಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲೆಯ ಕುರುಬ ಮುಖಂಡರ ವಿರುದ್ಧ ನಾಲಿಗೆ ಹರಿ ಬಿಡುತ್ತಿರುವ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ಹರಿಹಾಯ್ದರು.

tmk
author img

By

Published : Oct 26, 2019, 6:42 PM IST

ತುಮಕೂರು: ಹೈಕಮಾಂಡ್ ಓಲೈಕೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲೆಯ ಕುರುಬ ಮುಖಂಡರ ವಿರುದ್ಧ ನಾಲಿಗೆ ಹರಿ ಬಿಡುತ್ತಿರುವ ಮಾಜಿ ಸಚಿವ ಸೊಗಡು ಶಿವಣ್ಣ ತಮ್ಮ ಹೇಳಿಕೆಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಕುರುಬ ಸಂಘಟನೆಗಳ ಒಕ್ಕೂಟ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಎಚ್ಚರಿಕೆ ನೀಡಿದೆ.

ಕುರುಬ ಸಂಘಟನೆಗಳ ಒಕ್ಕೂಟ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳಗದಿಂದ ಸುದ್ದಿಗೋಷ್ಠಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುರುಬ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಕೊಂಡವಾಡಿ ತಿಮ್ಮಯ್ಯ, ಸಿದ್ದರಾಮಯ್ಯ ಆಕಾಶದಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರಿಗೆ ಉಗಿದರೆ, ಅದು ತಮ್ಮ ಮುಖಕ್ಕೆ ಬೀಳಲಿದೆ ಎಂಬುದನ್ನು ಸೊಗಡು ಶಿವಣ್ಣ ಅರ್ಥಮಾಡಿಕೊಳ್ಳಲಿ. ಅಧಿಕಾರ ಸ್ಥಾನಮಾನ ಇಲ್ಲದ ಶಿವಣ್ಣ ಅವರು ಬಿಜೆಪಿ ಪಕ್ಷದ ಹಿರಿಯರನ್ನು ಓಲೈಸಲು ಹಾಗೂ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

ಸಿ.ಡಿ. ಚಂದ್ರಶೇಖರ್ ಮಾತನಾಡಿ, ಶಿವಣ್ಣ ಅವರು ದಲಿತರ ಮನೆಯಲ್ಲಿ ಊಟ ಮಾಡಿದ ತಕ್ಷಣ ಇವರು ಶ್ರೇಷ್ಠರಾಗುವುದಿಲ್ಲ. ಇವರ ಮನೆಗೆ ದಲಿತರನ್ನು ಕರೆದು ಸಹಪಂಕ್ತಿ ಭೋಜನ ಏರ್ಪಡಿಸಲಿ ಆಗ ನಾವು ಒಪ್ಪುತ್ತೇವೆ. ಸುಮ್ಮನೆ ಕುರುಬ ನಾಯಕರ ಬಗ್ಗೆ ಮಾತನಾಡುವುದು ತರವಲ್ಲ. ರಾಜಕೀಯವಾಗಿ ಮೂಲೆಗುಂಪಾಗಿರುವ ಸೊಗಡು ಶಿವಣ್ಣ 20 ವರ್ಷಗಳ ಅಧಿಕಾರವಧಿಯಲ್ಲಿ ಏನು ಮಾಡಿದ್ದಾರೆ, ಹೇಗೆ ನಡೆದುಕೊಂಡಿದ್ದಾರೆ ಎಂಬುದು ಜಿಲ್ಲೆಯ ಜನತೆಗೆ ತಿಳಿದಿದೆ. ಸಜ್ಜನರಾಗಿದ್ದರೆ ಬಿಜೆಪಿ ಹೈಕಮಾಂಡ್ ಇವರನ್ನ ಏಕೆ ಮೂಲೆಗುಂಪು ಮಾಡುತ್ತಿತ್ತು, ರಾಜಕೀಯವಾಗಿ ನೇಪತ್ಯಕ್ಕೆ ಸರಿಯುತ್ತಿರುವ ಸೊಗಡು ಶಿವಣ್ಣ ಪ್ರತಿಪಕ್ಷಗಳ ಮುಖಂಡರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟರೆ ಹೈಕಮಾಂಡ್ ಗುರುತಿಸಿ ಸ್ಥಾನಮಾನ ನೀಡುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಎಂದರು.

Intro:ತುಮಕೂರು: ಹೈಕಮಾಂಡ್ ಓಲೈಕೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲೆಯ ಕುರುಬ ಮುಖಂಡರ ವಿರುದ್ಧ ನಾಲಿಗೆ ಹರಿ ಬಿಡುತ್ತಿರುವ ಮಾಜಿ ಸಚಿವ ಸೊಗಡು ಶಿವಣ್ಣ ತಮ್ಮ ಹೇಳಿಕೆಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಕುರುಬ ಸಂಘಟನೆಗಳ ಒಕ್ಕೂಟ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಎಚ್ಚರಿಕೆ ನೀಡಿದರು.

Body:ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುರುಬ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಕೊಂಡವಾಡಿ ತಿಮ್ಮಯ್ಯ, ಸಿದ್ದರಾಮಯ್ಯ ಆಕಾಶದಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಅವರಿಗೆ ಉಗಿದರೆ, ಅದು ತಮ್ಮ ಮುಖಕ್ಕೆ ಬೀಳಲಿದೆ ಎಂಬುದನ್ನು ಸೊಗಡು ಶಿವಣ್ಣ ಅರ್ಥಮಾಡಿಕೊಳ್ಳಲಿ. ಅಧಿಕಾರ ಸ್ಥಾನಮಾನ ಇಲ್ಲದ ಶಿವಣ್ಣ ಅವರು ಬಿಜೆಪಿ ಪಕ್ಷದ ಹಿರಿಯರನ್ನು ಓಲೈಸಲು ಹಾಗೂ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು. ಏಕವಚನದಲ್ಲಿ ಮಾತನಾಡುವುದು ಸಿದ್ದರಾಮಯ್ಯ ನಡೆದು ಬಂದ ದಾರಿ, ಅವರ ಮಾತು ಆಡುಭಾಷೆ ಎಂದು ಏಕವಚನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳಲು ಮುಂದಾದರು.
ಬೈಟ್: ಕೊಂಡವಾಡಿ ತಿಮ್ಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ.
ಸಿ.ಡಿ ಚಂದ್ರಶೇಖರ್ ಮಾತನಾಡಿ, ಶಿವಣ್ಣ ಅವರು ದಲಿತರ ಮನೆಯಲ್ಲಿ ಊಟ ಮಾಡಿದ ತಕ್ಷಣ ಇವರು ಶ್ರೇಷ್ಠರಾಗುವುದಿಲ್ಲ. ಇವರ ಮನೆಗೆ ದಲಿತರನ್ನು ಕರೆದು ಸಹಪಂಕ್ತಿ ಭೋಜನ ಏರ್ಪಡಿಸಲಿ ಆಗ ನಾವು ಒಪ್ಪುತ್ತೇವೆ. ಸುಮ್ಮನೆ ಕುರುಬ ನಾಯಕರ ಬಗ್ಗೆ ಮಾತನಾಡುವುದು ತರವಲ್ಲ, ರಾಜಕೀಯವಾಗಿ ಮೂಲೆಗುಂಪಾಗಿರುವ ಸೊಗಡು ಶಿವಣ್ಣ 20ವರ್ಷಗಳ ಅಧಿಕಾರವಧಿಯಲ್ಲಿ ಏನು ಮಾಡಿದ್ದಾರೆ, ಹೇಗೆ ನಡೆದುಕೊಂಡಿದ್ದಾರೆ ಎಂಬುದು ಜಿಲ್ಲೆಯ ಜನತೆಗೆ ತಿಳಿದಿದೆ. ಸಜ್ಜನರಾಗಿದ್ದರೆ ಬಿಜೆಪಿ ಹೈಕಮಾಂಡ್ ಇವರನ್ನ ಏಕೆ ಮೂಲೆಗುಂಪು ಮಾಡುತ್ತಿತ್ತು, ರಾಜಕೀಯವಾಗಿ ನೇಪತ್ಯಕ್ಕೆ ಸರಿಯುತ್ತಿರುವ ಸೊಗಡು ಶಿವಣ್ಣ ಪ್ರತಿಪಕ್ಷಗಳ ಮುಖಂಡರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟರೆ ಹೈಕಮಾಂಡ್ ಗುರುತಿಸಿ ಸ್ಥಾನಮಾನ ನೀಡುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಎಂದರು.
ಬೈಟ್: ಸಿ.ಡಿ ಚಂದ್ರಶೇಖರ್, ಕುರುಬ ಸಮಾಜದ ಮುಖಂಡ

Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.