ತುಮಕೂರು: ಕುಣಿಗಲ್ ಶಾಸಕ ಡಾ. ರಂಗನಾಥ್ ಪಿಪಿಇ ಕಿಟ್ ಧರಿಸಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಶಾಸಕ ಡಾ. ರಂಗನಾಥ್ ಅವರಿಗೆ ಇತ್ತೀಚಿಗಷ್ಟೇ ಕೊರೊನಾ ದೃಢಪಪಟ್ಟಿದ್ದು, ಸದ್ಯ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಕೋವಿಡ್ ಆಸ್ಪತ್ರೆಗೆ ತೆರಳಿ, ಊಟ, ವಸತಿ ಸೌಲಭ್ಯ ಹೇಗಿದೆ ಎಂದು ವಿಚಾರಿಸಿದರು.
ಬಳಿಕ ಕೊರೊನಾ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ನಾನು ಕೂಡ ಇತ್ತೀಚಿಗಷ್ಟೇ ಗುಣಮುಖನಾಗಿದ್ದೇನೆ ಎಂದು ಸೋಂಕಿತರಿಗೆ ಧೈರ್ಯ ಹೇಳಿದರು.