ETV Bharat / state

ಕೋವಿಡ್ 19: ತುಮಕೂರು ಜಿಲ್ಲೆಯಲ್ಲಿ 326 ಮಾದರಿ ನೆಗೆಟಿವ್​

ತುಮಕೂರಿಗೆ ಬಂದಿದ್ದ 480 ಜನರನ್ನು ತೀವ್ರ ನಿಗಾದಲ್ಲಿಡಲಾಗಿತ್ತು. ಈ ಪೈಕಿ 326 ಜನರ ವರದಿ ನೆಗೆಟಿವ್​ ಬಂದಿದೆ. 4 ಮಾದರಿಗಳು ತಿರಸ್ಕತಗೊಂಡಿವೆ. 59 ಮಂದಿಯ ತಪಾಸಣೆ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ ತಿಳಿಸಿದ್ದಾರೆ.

ಕೋವಿಡ್ 19
ಕೋವಿಡ್ 19
author img

By

Published : Apr 14, 2020, 7:12 PM IST

ತುಮಕೂರು: ಕೊವೀಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಹೊರಗಡೆಯಿಂದ ಜಿಲ್ಲೆಗೆ ಬಂದಿರುವ 480 ಮಂದಿಯನ್ನು ತೀವ್ರ ನಿಗಾದಲ್ಲಿಡಲಾಗಿತ್ತು. ಈ ಪೈಕಿ 326 ಜನರ ವರದಿ ನೆಗೆಟಿವ್​ ಬಂದಿದೆ.

70 ಮಂದಿಯನ್ನು ಹೋಮ್​​​ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ. ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಾರದೆಂದು ಸೂಚಿಸಲಾಗಿದೆ. ಒಟ್ಟು 195 ಮಂದಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್‍ನಲ್ಲಿ ಇಡಲಾಗಿದೆ. 300 ಜನರ 28 ದಿನಗಳ ಹೋಮ್​​ ಕ್ವಾರೆಂಟೈನ್ ಅವಧಿ ಪೂರ್ಣಗೊಂಡಿದೆ.

ತುಮಕೂರು ಜಿಲ್ಲೆಯಲ್ಲಿ 326 ಮಾದರಿ ನೆಗೆಟಿವ್​
ತುಮಕೂರು ಜಿಲ್ಲೆಯಲ್ಲಿ 326 ಮಾದರಿ ನೆಗೆಟಿವ್​

ಇದುವರೆಗೂ 391 ಜನರ ಗಂಟಲು ಸ್ರಾವ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 326 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿದೆ. 2 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಸಿರಾ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 4 ಮಾದರಿಗಳು ತಿರಸ್ಕತಗೊಂಡಿವೆ. 59 ಮಂದಿಯ ತಪಾಸಣೆಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.