ETV Bharat / state

ವೈದ್ಯರಿಲ್ಲದೆ ನರ್ಸ್​ಗಳಿಂದ ಹೆರಿಗೆ, ಮಗು ಸಾವು: ತುಮಕೂರು ಜಿಲ್ಲಾಸ್ಪತ್ರೆ ವಿರುದ್ಧ ಆಕ್ರೋಶ

ವೈದ್ಯರ ನಿರ್ಲಕ್ಷದಿಂದ ನವಜಾತ ಶಿಶುವೊಂದು ಮೃತಪಟ್ಟಿದೆ ಎಂದು ಆರೋಪಿಸಿ ಬಾಣಂತಿ ಮಹಿಳೆಯ ಸಂಬಂಧಿಕರು ತುಮಕೂರು ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

author img

By

Published : Aug 27, 2019, 8:37 PM IST

ತುಮಕೂರಿನ ಜಿಲ್ಲಾಸ್ಪತ್ರೆ ವಿರುದ್ಧ ಆಕ್ರೋಶ

ತುಮಕೂರು: ವೈದ್ಯರ ನಿರ್ಲಕ್ಷದಿಂದ ಆಗತಾನೆ ಹುಟ್ಟಿದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಸಂಬಂಧಿಕರು ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ದೇವರಾಯಪಟ್ಟಣ ನಿವಾಸಿಯಾದ ರೇಖಾ ಎಂಬ ಗರ್ಭಿಣಿ ಮಹಿಳೆಯನ್ನು ಸೋಮವಾರ ರಾತ್ರಿ 2 ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬೆಳಗಿನ ಜಾವ 5 ಗಂಟೆಯವರೆಗೂ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ನರ್ಸ್​ಗಳೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಇದರಿಂದ ಹೆರಿಗೆ ಸಮಯದಲ್ಲಿ ಗರ್ಭದಲ್ಲೇ ಮಗು ಸಾವನ್ನಪ್ಪಿದೆ. ಶುಶ್ರೂಷಕಿಯರ ಬೇಜವಾಬ್ದಾರಿಯೇ ಇದಕ್ಕೆಲ್ಲ ಕಾರಣ. ಇವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ರೇಖಾ ಪೋಷಕರು ಜಿಲ್ಲಾಸ್ಪತ್ರೆಯ ಮುಂದೆ ಪ್ರತಿಭಟಿಸಿದ್ದಾರೆ.

ತುಮಕೂರಿನ ಜಿಲ್ಲಾಸ್ಪತ್ರೆ ವಿರುದ್ಧ ಆಕ್ರೋಶ

ಇದೇ ವೇಳೆ ಮಾತನಾಡಿದ ರೇಖಾಳ ಸಹೋದರ ಸ್ವಾಮಿ, ವೈದ್ಯರು ಗುರುವಾರದಂದು ದಿನಾಂಕ ನಿಗದಿಪಡಿಸಿದ್ದರು. ಆದರೆ ಸೋಮವಾರ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಸೇರಿಸಿದ್ದೆವು. ಇದಕ್ಕೆ ಸರಿಯಾಗಿ ಸ್ಪಂದಿಸದ ಆಸ್ಪತ್ರೆಯ ಶುಶ್ರೂಷಕಿಯರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ವೈದ್ಯರನ್ನು ಸಂಪರ್ಕಿಸದೆ ಶುಶ್ರೂಷಕಿಯರು ಹೆರಿಗೆ ಮಾಡಿಸಿದ ಕಾರಣ ಮಗು ಸತ್ತುಹೋಗಿರಬಹುದು ಎಂದು ಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಅವರು, ನಿನ್ನೆ ರಾತ್ರಿ ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿಯನ್ನು ಶುಶ್ರೂಷಕಿಯರು ಹೆರಿಗೆ ಮಾಡಿಸಿದ್ದಾರೆ. ಆದರೆ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಮಗು ಸಾವನ್ನಪ್ಪಲು ಶುಶ್ರೂಷಕಿಯರೇ ಕಾರಣ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Intro:ತುಮಕೂರು: ವೈದ್ಯರ ನಿರ್ಲಕ್ಷದಿಂದ ನವಜಾತ ಶಿಶುವೊಂದು ಮೃತಪಟ್ಟಿರುವ ಘಟನೆ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

Body:ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ದೇವರಾಯಪಟ್ಟಣ ನಿವಾಸಿಯಾದ ರೇಖಾ ಎಂಬ ಗರ್ಭಿಣಿಯನ್ನು ಸೋಮವಾರ ರಾತ್ರಿ ಎರಡು ಗಂಟೆಗೆ ದಾಖಲು ಮಾಡಲಾಗಿತ್ತು.
ಬೆಳಗಿನ ಜಾವ 5 ಗಂಟೆ ಸುಮಾರಿಗೆ ವೈದ್ಯರಿಲ್ಲದ ಕಾರಣ ಶುಶ್ರೂಷಕಿಯರೇ ಹೆರಿಗೆಯನ್ನು ಮಾಡಿಸಲು ಮುಂದಾಗಿದ್ದಾರೆ, ಇದರಿಂದ ಹೆರಿಗೆ ಫಲಕಾರಿಯಾಗದೇ ಗರ್ಭದಲ್ಲಿ ಮಗು ಸಾವನ್ನಪ್ಪಿದೆ. ಇದಕ್ಕೆ ಶುಶ್ರೂಕಿಯರ ಬೇಜವಾಬ್ದಾರಿಯೇ ಕಾರಣವಾಗಿದೆ. ಇವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ರೇಖಾರ ಪೋಷಕರು ಜಿಲ್ಲಾಸ್ಪತ್ರೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ರೇಖಾಳ ಸಹೋದರ ಸ್ವಾಮಿ, ಡಾಕ್ಟರ್ ಗುರುವಾರದಂದು ದಿನಾಂಕ ನಿಗದಿಪಡಿಸಿದ್ದರು, ಆದರೆ ಸೋಮವಾರ ರಾತ್ರಿಯೇ ಹೇರಿಗೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಸೇರಿಸಿದೆವು. ಇದಕ್ಕೆ ಸರಿಯಾಗಿ ಸ್ಪಂದಿಸದ ಆಸ್ಪತ್ರೆಯ ಶುಶ್ರೂಷಕಿಯರು ಬೇಜವಾಬ್ದಾರಿಯಿಂದ ವರ್ತಿಸಿದರು, ಜೊತೆಗೆ ನಮ್ಮ ಮೇಲೆ ದಬ್ಬಾಳಿಕೆ ಮಾತುಗಳನ್ನು ಆಡಿದ್ದಾರೆ.
ವೈದ್ಯರನ್ನು ಸಂಪರ್ಕಿಸದೆ ಶುಶ್ರೂಷಕಿಯರು ಹೆರಿಗೆ ಮಾಡಿಸಿದ ಕಾರಣ ಮಗು ಸತ್ತುಹೋಗಿರಬಹುದು ಹಾಗಾಗಿ ನಮಗೆ ನ್ಯಾಯ ಒದಗಿಸಬೇಕು ಎಂದು ಸ್ವಾಮಿ ಅಳಲನ್ನು ತೋಡಿಕೊಂಡರು.
ಬೈಟ್: ಸ್ವಾಮಿ, ಬಾಣಂತಿಯ ಸಹೋದರ

Conclusion:ನಿನ್ನೆ ರಾತ್ರಿ ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿಯನ್ನು ಶುಶ್ರೂಷಕಿಯರು ಹೆರಿಗೆ ಮಾಡಿಸಿದ್ದಾರೆ, ಆದರೆ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಸಾರ್ವಜನಿಕರು ಶುಶ್ರೂಷಕಿಯರೇ ಮಗು ಸಾವನ್ನಪ್ಪಲು ಕಾರಣ ಎಂದು ಆರೋಪಿಸಿದ್ದಾರೆ, ಹಾಗಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ವೀರಭದ್ರಯ್ಯ ತಿಳಿಸಿದರು.
ಬೈಟ್: ಡಾ. ವೀರಭದ್ರಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ

ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.