ತುಮಕೂರು: ಜಿಲ್ಲೆಯ ಬಿಜೆಪಿಯಲ್ಲಿರುವ ಅಸಮಾಧಾನವನ್ನು ಹೋಗಲಾಡಿಸಲು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಸೊಗಡು ಶಿವಣ್ಣ ಜೊತೆ ಕೆಲಕಾಲ ರಹಸ್ಯ ಮಾತುಕತೆ ನಡೆಸಿದರು.
ನಗರದಲ್ಲಿರುವ ಶಿವಣ್ಣ ಮನೆಗೆ ಭೇಟಿ ನೀಡಿ ಅರ್ಧ ಗಂಟೆ ಕಾಲ ಬಿಎಸ್ವೈ ಮಾತುಕತೆ ನಡೆಸಿದರು. ನಂತರ ಉಭಯ ನಾಯಕರು, ಮಾಧ್ಯಮದವರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಅವರು ನನ್ನ ಮನೆಗೆ ಬಂದಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ವ್ಯಕ್ತಿಗಾಗಿ ಮತ ಕೇಳೊಲ್ಲ, ಮೋದಿಗಾಗಿ ಮತ ಕೇಳ್ತೇನೆ. ಈ ಬಾರಿ ತುಮಕೂರು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ನಮ್ಮಿಂದ ತಪ್ಪಾಗಿದೆ ಸರಿಪಡಿಸಿಕೊಳ್ತೇವೆ. ಸೊಗಡು ಶಿವಣ್ಣ ಅವರಿಗೆ ಈ ಹಿಂದೆ ಅನ್ಯಾಯ ಆಗಿದೆ. ಚುನಾವಣೆ ನಂತರ ಅದನ್ನ ಸರಿಪಡಿಸಿಕೊಳ್ತೇವೆ. ಅವರಿಗೆ ಯಾವ ಸ್ಥಾನಮಾನ ಕೊಡಬೇಕೋ ಅದನ್ನ ಕೊಡ್ತೇವೆ ಎಂದು ಹೇಳಿದ್ರು.