ETV Bharat / state

ಅಯೋಧ್ಯೆಗೆ ಹೋಗಬೇಕೆಂಬ ಇಚ್ಛೆ ಇದೆ, ಹೋಗುವ ಪ್ರಯತ್ನ ಮಾಡುತ್ತೇನೆ: ಮಾಜಿ ಪ್ರಧಾನಿ ದೇವೇಗೌಡ - ರಾಮಮಂದಿರ

ನನಗೆ ಅಯೋಧ್ಯೆಗೆ ಹೋಗಬೇಕೆಂಬ ಇಚ್ಛೆ ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ
ಮಾಜಿ ಪ್ರಧಾನಿ ದೇವೇಗೌಡ
author img

By ETV Bharat Karnataka Team

Published : Jan 18, 2024, 5:16 PM IST

Updated : Jan 18, 2024, 5:47 PM IST

ಮಾಜಿ ಪ್ರಧಾನಿ ದೇವೇಗೌಡ

ತುಮಕೂರು : ನನಗೆ ಅಯೋಧ್ಯೆಗೆ ಹೋಗಬೇಕೆಂಬ ಇಚ್ಛೆ ಇದೆ. ಹೋಗುವ ಪ್ರಯತ್ನ ಮಾಡುತ್ತೇನೆ. ಆರೋಗ್ಯ ನೋಡಿಕೊಳ್ಳಬೇಕಾಗಿದೆ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ತಿಳಿಸಿದ್ದಾರೆ. ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ನಡುವೆ ನಿಜವಾಗಿಯೂ ಹೋಗುವ ಪ್ರಯತ್ನ ಮಾಡುತ್ತೇನೆ. ಶ್ರೀ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಹೇಳಿಕೆಯನ್ನು ಕೊಡುವುದಿಲ್ಲ ಎಂದರು.

ಶ್ರೀ ಬಾಲ ಮಂಜುನಾಥ ಶ್ರೀಗಳು ಶ್ರೀ ಕ್ಷೇತ್ರಕ್ಕೆ ಬರಲು ಆಹ್ವಾನ ನೀಡಿದ್ದರು. ವಿದ್ಯಾ ಚೌಡೇಶ್ವರಿಯ ಉತ್ತರಾಯಣ ಪುಣ್ಯಕಾಲ. ಅತ್ಯಂತ ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ವರ್ಧಂತಿ ಉತ್ಸವ ಮತ್ತು ಅಮ್ಮನವರ ಜಾತ್ರೆಯು ಶಾಸ್ತ್ರೋಕ್ತವಾಗಿ ನಡೆದಿದೆ. ನಾನು ಉಪವಾಸ ವ್ರತ ಕೈಗೊಂಡು ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದೇನೆ ಎಂದರು.

ನನ್ನ ಎರಡು ಮಂಡಿ ಚೆನ್ನಾಗಿಲ್ಲ. ಆದರೂ ಕೂಡ ದೀರ್ಘ ದಂಡ ನಮಸ್ಕಾರ ಮಾಡಿದ್ದೇನೆ. ಇಲ್ಲಿ ನಡೆದಂತಹ ಹೋಮ ಅತ್ಯಂತ ವಿಶೇಷವಾಗಿತ್ತು. ಶ್ರೀ ವಿದ್ಯಾ ಚೌಡೇಶ್ವರಿ ದೇವಿಗೆ ಒಂದು ಕಿರೀಟವನ್ನು ಧಾರಣೆ ಮಾಡಿಸಿದ್ದೇನೆ ಎಂದರು. ಶ್ರೀ ಚೌಡೇಶ್ವರಿ ದೇವಿಯ ಶಕ್ತಿಯಿಂದಾಗಿ ಮೂರು ಬಾರಿ ನಾನು ಪ್ರದಕ್ಷಿಣೆ ಮಾಡಿದ್ದೇನೆ. ಶ್ರೀ ಚೌಡೇಶ್ವರಿ ದೇವಿಗೆ ತೊಡಿಸಿದ ವಜ್ರದ ಕಿರೀಟ ದೇವಸ್ಥಾನದಿಂದಲೇ ಕೊಟ್ಟಿರುವುದು ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಹೋಗಿದ್ರು. ನನಗೂ ಇಲ್ಲಿಗೆ ಭೇಟಿ ನೀಡುವಂತೆ ಹೇಳಿದರು. ಹಾಗಾಗಿ ಬಂದು ಪೂಜೆ ಸಲ್ಲಿಸಿದ್ದೇನೆ ಎಂದು ಹೆಚ್​ಡಿಡಿ ಹೇಳಿದರು.

ಇದನ್ನೂ ಓದಿ: 8 ಸಾವಿರ ಕೋಟಿ ಬಿಡುಗಡೆ ಮಾಡಿ, ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿ: ಹೆಚ್. ಡಿ ದೇವೇಗೌಡ ಮನವಿ

Last Updated : Jan 18, 2024, 5:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.