ETV Bharat / state

ಶಿರಾ ಮಾತ್ರವಲ್ಲದೆ ಉಳಿದ ತಾಲೂಕುಗಳಿಗೂ ಹೇಮಾವತಿ ನೀರು ಹರಿಸುವಂತೆ ಆಗ್ರಹ

ಶಿರಾ ಭಾಗದಲ್ಲಿನ ನೀರಾವರಿ ವಂಚಿತ ರೈತರಂತೆ ತುಮಕೂರು, ಗುಬ್ಬಿ, ತುರುವೇಕೆರೆ ತಾಲೂಕಿನಲ್ಲಿಯೂ ಕೂಡ ರೈತರಿದ್ದಾರೆ. ಅವರನ್ನು ಗಣನೆಗೆ ತೆಗೆದುಕೊಂಡು, ಈಗಾಗಲೇ ಹಂಚಿಕೆ ಆಗಿರುವಂತೆ ಹೇಮಾವತಿ ನೀರನ್ನು ಈ ಭಾಗದ ಕೆರೆಗಳಿಗೂ ಹರಿಸಬೇಕು ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಒತ್ತಾಯಿಸಿದ್ದಾರೆ.

hemavathi-river-water-drain-tumakuru-district-news
ಶಿರಾ ಮಾತ್ರವಲ್ಲದೇ ಉಳಿದ ತಾಲೂಕುಗಳಿಗೂ ಹೇಮಾವತಿ ನೀರು ಹರಿಸುವಂತೆ ಆಗ್ರಹ...
author img

By

Published : Dec 17, 2020, 8:41 PM IST

ತುಮಕೂರು: ಜಿಲ್ಲೆಯ ಶಿರಾ ವಿಧಾನಸಭೆ ಉಪಚುನಾವಣೆ ಸಂದರ್ಭದಲ್ಲಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಕುರಿತಂತೆ ಸಿಎಂ ನೀಡಿದ್ದ ಆಶ್ವಾಸನೆಯಂತೆ ನೀರು ಹರಿಸಲಾಗಿದೆ. ಆದರೆ ಶಿರಾ ತಾಲೂಕಿಗೆ ಹಂಚಿಕೆ ಇಲ್ಲದಿದ್ದರೂ ಹೇಮಾವತಿ ನೀರನ್ನು ಹರಿಸಲಾಗಿದೆ. ಜಿಲ್ಲೆಯ ಇನ್ನುಳಿದ ತಾಲೂಕುಗಳಿಗೂ ನೀರು ಹರಿಸಬೇಕಿದೆ ಎಂಬ ಕೂಗು ಕೇಳಿ ಬರುತ್ತಿದೆ.

ಶಿರಾ ಮಾತ್ರವಲ್ಲದೆ ಉಳಿದ ತಾಲೂಕುಗಳಿಗೂ ಹೇಮಾವತಿ ನೀರು ಹರಿಸುವಂತೆ ಆಗ್ರಹ

ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದನ್ನು ಜೆಡಿಎಸ್ ಪಕ್ಷ ವಿರೋಧಿಸುತ್ತಿಲ್ಲ, ಬದಲಿಗೆ ಸ್ವಾಗತಿಸಲಾಗುತ್ತಿದೆ. ಆದರೆ ಶಿರಾ ವಿಧಾನಸಭೆಯ ಉಪಚುನಾವಣೆ ಗೆಲುವಿಗಾಗಿ ಯಾವುದೇ ಹಂಚಿಕೆ ಇಲ್ಲದಂತಹ ಮದಲೂರು ಕೆರೆಗೆ ನೀರು ಹರಿಸಿ ಬಿಜೆಪಿ ಶಿರಾ ಭಾಗದ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.

ಆದರೆ, ಶಿರಾ ಭಾಗದಲ್ಲಿನ ನೀರಾವರಿ ವಂಚಿತ ರೈತರಂತೆ ತುಮಕೂರು, ಗುಬ್ಬಿ, ತುರುವೇಕೆರೆ ತಾಲೂಕಿನಲ್ಲಿಯೂ ಕೂಡ ರೈತರಿದ್ದಾರೆ. ಅವರನ್ನು ಗಣನೆಗೆ ತೆಗೆದುಕೊಂಡು, ಈಗಾಗಲೇ ಹಂಚಿಕೆ ಆಗಿರುವಂತೆ ಹೇಮಾವತಿ ನೀರನ್ನು ಈ ಭಾಗದ ಕೆರೆಗಳಿಗೂ ಹರಿಸಬೇಕು. ಈ ಭಾಗದ ರೈತಾಪಿ ವರ್ಗದವರನ್ನು ಕೂಡ ಮುಖ್ಯಮಂತ್ರಿಗಳು ಗಣನೆಗೆ ತೆಗೆದುಕೊಳ್ಳಬೇಕು ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಆಗ್ರಹಿಸಿದ್ದಾರೆ.

ಓದಿ: ಕ್ರಿಸ್​​ಮಸ್, ಹೊಸ ವರ್ಷಾಚರಣೆಗೆ ಕೋವಿಡ್ ಮಾರ್ಗಸೂಚಿ ಬಿಡುಗಡೆ

ಈ ಮೂಲಕ ಶಿರಾ ಹೊರತುಪಡಿಸಿ ಬೇರೆ ತಾಲೂಕನ್ನು ಕೂಡ ಗಣನೆಗೆ ತೆಗೆದುಕೊಂಡು ಹೇಮಾವತಿ ನದಿ ನೀರನ್ನು ಹಂಚಿಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿ ಯೋಜನೆ ರೂಪಿಸಲಿದೆ ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.