ETV Bharat / state

ತಾಕತ್ತಿದ್ರೆ ಬರಲಿ, ಗಂಡಸಾದ್ರೆ ನನ್ನ ಎದುರು ಸ್ಪರ್ಧಿಸಲಿ: ಹೆಚ್​​ಡಿಕೆಗೆ ಶಾಸಕ ಶ್ರೀನಿವಾಸ್ ಓಪನ್​ ಚಾಲೆಂಜ್​ - ಹೆಚ್​​ಡಿ ಕುಮಾರಸ್ವಾಮಿ ನನ್ನ ಎದುರು ಸ್ಪರ್ಧಿಸಲಿ ಎಂದ ಗುಬ್ಬಿ ಶಾಸಕ ಶ್ರೀನಿವಾಸ್

ನಾನು ಹೆಚ್​ ಡಿ ಕುಮಾರಸ್ವಾಮಿಗೆ ಹೆದರಿಕೊಂಡು ಯಾರಿಗೂ ಕಚ್ಚೆ ಕಟ್ಟುವುದಿಲ್ಲ. ನಾನು ನನ್ನ ಮನಸಾಕ್ಷಿಗೆ ವಿರುದ್ಧವಾಗಿ ಎಂದೂ ಹೋಗುವುದಿಲ್ಲ. ಹೆಚ್​ ಡಿ ಕುಮಾರಸ್ವಾಮಿ ನಾಟಕವಾಡುತ್ತಿದ್ದಾರೆ. ದೊಡ್ಡ ನಾಟಕಕಾರ ಅವನು ಎಂದು ಸ್ವಪಕ್ಷದ ನಾಯಕನ ವಿರುದ್ಧವೇ ಶಾಸಕ ಶ್ರೀನಿವಾಸ್​ ಏಕವನಚದಲ್ಲೇ ವಾಗ್ದಾಳಿ ನಡೆಸಿದ್ದಾರೆ.

JDS MLA Srinivas open challenge to HD Kumaraswamy
ಹೆಚ್​​ಡಿ ಕುಮಾರಸ್ವಾಮಿ ನನ್ನ ಎದುರು ಸ್ಪರ್ಧಿಸಲಿ ಎಂದ ಗುಬ್ಬಿ ಶಾಸಕ ಶ್ರೀನಿವಾಸ್
author img

By

Published : Jun 11, 2022, 4:39 PM IST

ತುಮಕೂರು: ಜೆಡಿಎಸ್ ಶಾಸಕಾಂಗ ಪಕ್ಷದ​​ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್​​.ಡಿ. ಕುಮಾರಸ್ವಾಮಿ ವಿರುದ್ಧ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್​ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನನ್ನ ಮನೆಗೆ ಮುತ್ತಿಗೆ ಹಾಕುತ್ತಾರಂತೆ. ತಾಕತ್ತು ಇದ್ದರೆ ಅವನೇ ಬಂದು ನನ್ನ ಮನೆಗೆ ಮುತ್ತಿಗೆ ಹಾಕಲಿ. ಗಂಡಸಾದರೆ ಅವನು ನನ್ನ ಎದುರು ಸ್ಪರ್ಧೆ ಮಾಡಲಿ ಎಂದು ಏಕವನಚನದಲ್ಲೇ ಹೆಚ್​ಡಿಕೆಗೆ ಬಹಿರಂಗ ಸವಾಲು ಎಸೆದಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಊಸರವಳ್ಳಿ ಇದ್ದಹಾಗೆ, ಅವನೊಬ್ಬನೇ ಸತ್ಯಹರಿಶ್ಚಂದ್ರನಾ?. ತಾನೊಬ್ಬನೇ ಎಲ್ಲ ಎಂದು ತಿಳಿದುಕೊಂಡಿದ್ದಾನೆ. ಅವನಿಗಿಂತ ಬುದ್ಧಿವಂತರಿದ್ದಾರೆ. ಅವರ ಹಡಗು ಮುಳುಗುತ್ತಿದೆ. ಅದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಗಂಡಸಾದ್ರೆ ನನ್ನ ಎದುರು ಸ್ಪರ್ಧಿಸಲಿ: ಹೆಚ್​​ಡಿಕೆ ವಿರುದ್ಧ ಶಾಸಕ ಶ್ರೀನಿವಾಸ್ ವಾಗ್ದಾಳಿ

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದಿಲ್ಲ ಅನ್ನೋದು ಗೊತ್ತಿತ್ತು. ಆದರೂ, ಅಭ್ಯರ್ಥಿ ಹಾಕಿದ್ದಾರೆ. ಅಲ್ಲದೇ, ಬೇರೊಬ್ಬ ಶಾಸಕರಿಗೆ ಸ್ವತಃ ಕುಮಾರಸ್ವಾಮಿಯೇ ಹಣ ಕೊಟ್ಟು ಅಡ್ಡಮತದಾನ ಮಾಡಿಸಿದ್ದು, ಇದೀಗ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕಳೆದ ಒಂದೂವರೆ ವರ್ಷದಿಂದ ನನಗು-ಕುಮಾರಸ್ವಾಮಿ ಮಧ್ಯೆ ಉತ್ತಮ ಸಂಬಂಧವಿಲ್ಲ. ನನಗೆ ಅವಮಾನ ಮಾಡುತ್ತಲೇ ಇದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಬೇರೆ ಪಕ್ಷದ ಶಾಸಕರಿಗೆ ಜೆಡಿಎಸ್ ಯೋಗ್ಯತೆ ಗೊತ್ತಿತ್ತು. ಅಡ್ಡ ಮತದಾನ ಮಾಡುವ ಮೂಲಕ ಜೆಡಿಎಸ್​​ಗೆ ಮತ ಹಾಕುವುದಿಲ್ಲ ಎಂಬ ವಿಷಯ ಕುಮಾರಸ್ವಾಮಿಗೂ ಗೊತ್ತಿತ್ತು. ಹೀಗಾಗಿ ನನ್ನ ತೇಜೋವಧೆ ಮಾಡಲು ಈ ರೀತಿಯ ಷಡ್ಯಂತ್ರ ಮಾಡಿದ್ದಾರೆ ಎಂದು ಕಿಡಿಕಾರಿದರು.

ನಾನು ಕುಮಾರಸ್ವಾಮಿಗೆ ಹೆದರಿಕೊಂಡು ಯಾರಿಗೂ ಕಚ್ಚೆ ಕಟ್ಟುವುದಿಲ್ಲ. ನಾನು ನನ್ನ ಮನಸಾಕ್ಷಿಗೆ ವಿರುದ್ಧವಾಗಿ ಎಂದೂ ಹೋಗುವುದಿಲ್ಲ. ಕುಮಾರಸ್ವಾಮಿ ನಾಟಕವಾಡುತ್ತಿದ್ದಾರೆ. ದೊಡ್ಡ ನಾಟಕಕಾರ ಅವನು ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಶ್ರೀನಿವಾಸ್​ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ನನ್ನ‌ ವಿರುದ್ದ ಮಾತನಾಡಲು ಜೆಡಿಎಸ್​ಗೆ ಯಾವುದೇ ಹಕ್ಕಿಲ್ಲ, ನಾನೀಗ ಕಾಂಗ್ರೆಸ್​ನಲ್ಲಿದ್ದೇನೆ: ಶ್ರೀನಿವಾಸಗೌಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.