ತುಮಕೂರು : ಆರ್ಎಸ್ಎಸ್ ನವರು ಪ್ಯಾಂಟಿಗೆ ಬಂದವ್ರೆ. ಆದರೆ, ಚಡ್ಡಿ ಬ್ಯಾನ್ ಆಗಿಲ್ಲ. ಪ್ಯಾಂಟ್ ಹಾಕಿಕೊಂಡು ಶಾಖೆಯಲ್ಲಿ ವ್ಯಾಯಾಮ ಅಬ್ಯಾಸ ಮಾಡಲು ಸಾಧ್ಯವಿಲ್ಲ, ಚಡ್ಡಿಯಲ್ಲೇ ಅಭ್ಯಾಸ ಮಾಡುತ್ತಾರೆ ಎಂದು ಸಂಸದ ಜಿ ಎಸ್ ಬಸವರಾಜ್ ಪ್ರಶ್ನೆಯೊಂದಕ್ಕೆ ಖಡಕ್ ಆಗಿ ಉತ್ತರಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಚಡ್ಡಿ ದಹನ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಚೆಡ್ಡಿಗೆ ಬೆಂಕಿ ಹಚ್ಚಿದ್ದು ತಪ್ಪು, ಅದು ನಮ್ಮ ಬ್ರ್ಯಾಂಡ್ , ಬೇಕಿದ್ರೆ ಫೋಟೋ ದಹನ ಮಾಡಲಿ, ಚಡ್ಡಿ ದಹನ ಮಾಡಿದ್ದು ನಾನೆಲ್ಲೂ ನೋಡ್ಲಿಲ್ಲ ಎಂದಿದ್ದಾರೆ.
ಇದೇ ರೀತಿ ಏನಾದರೂ ಸೇವಾದಳದ ಬಾವುಟಕ್ಕೆ ಬೆಂಕಿ ಹಚ್ಚಿದ್ರೆ ಅವಮಾನ ಆಗಲ್ವಾ ಎಂದು ಪ್ರಶ್ನಿಸಿದ ಅವರು, ಸಚಿವ ನಾಗೇಶ್ ಮನೆಗೆ ಬೆಂಕಿನೂ ಹಾಕುವವರಿದ್ದರು, ಅದು ನಡೆಯುವ ಸಂಭವ ಇತ್ತು, ಅಲ್ಲಿ ಎಲ್ಲ ಕಿಡಿಗೇಡಿಗಳಿದ್ದರು ಎಂದು ಸಂಘಟನೆಯ ಕಾರ್ಯಕರ್ತರ ವಿರುದ್ಧ ಕಿಡಿಕಾರಿದರು.
ನಾಗೇಶ್ ಮನೆ ಮೇಲೆ ದಾಳಿ ನಡೆಸಿರುವುದು ಖಂಡನೀಯ. ಪ್ರಜಾಪ್ರಭುತ್ವಕ್ಕೆ ಇದು ಅವಮಾನ. ಅವರ ಪ್ರಾಣಕ್ಕೆ ಏನಾದರೂ ಹೆಚ್ಚು ಕಮ್ಮಿಯಾಗಿದ್ದರೆ ಯಾರು ಹೊಣೆಯಾಗುತ್ತಿದ್ದರು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮೂರು ಸಾವಿರ ರೂ.ಗಾಗಿ ಬೀದಿ ರಂಪಾಟ: ಚಾಕುವಿನಿಂದ ಹಲ್ಲೆಗೆ ಯತ್ನ VIDEO